ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರಂದು ಜಿಲ್ಲಾಮಟ್ಟದ ಸಂಸದರ ಕ್ರೀಡಾ ಮಹಾಮೇಳ

ತಾಲ್ಲೂಕುಮಟ್ಟದಲ್ಲಿ ವಿಜೇತರಾದವರು ಭಾಗವಹಿಸಲು ಕೇಂದ್ರ ಸಚಿವರ ಮನವಿ
Published 14 ಡಿಸೆಂಬರ್ 2023, 13:28 IST
Last Updated 14 ಡಿಸೆಂಬರ್ 2023, 13:28 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾಮಟ್ಟದ ಸಂಸದರ ಕ್ರೀಡಾ ಮಹಾಮೇಳ ನಗರದ ನೆಹರೂ ಕ್ರೀಡಾಂಗಣದಲ್ಲಿ ಡಿ. 16ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದ್ದು, ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರು ಭಾಗವಹಿಸಬೇಕು ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಸದರ ಕ್ರೀಡಾ ಮಹಾಮೇಳ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈಗ ಜಿಲ್ಲಾಮಟ್ಟದ ಅಂತಿಮ ಸ್ಪರ್ಧೆಗಳು ಜರುಗಲಿದ್ದು, ಅದರಲ್ಲೂ ಪಾಲ್ಗೊಳ್ಳಬೇಕೆಂದು ಗುರುವಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಬಡ್ಡಿ, ಖೋ ಖೋ, ವಾಲಿಬಾಲ್, 100 ಮೀ, 200 ಮೀ, 400 ಮೀ ಅಥ್ಲೆಟಿಕ್ಸ್‌, 4X100 ಮೀ ರಿಲೇ, ಗುಂಡು ಎಸೆತ, ಚಕ್ರ ಎಸೆತ ಹಾಗೂ ಭಲ್ಲೆ ಎಸೆತ ಆಟಗಳನ್ನು ಆಡಿಸಲಾಗಿತ್ತು. ಬೀದರ್‌ ತಾಲ್ಲೂಕುಮಟ್ಟದ ಸ್ಪರ್ಧೆಯಲ್ಲಿ ಕಬಡ್ಡಿಯಲ್ಲಿ ಬಾಲಕರ ವಿಭಾಗದಲ್ಲಿ ಹೊಕ್ರಾಣ ತಂಡ, ಬಾಲಕಿಯರ ವಿಭಾಗದಲ್ಲಿ ಕಮಠಾ ಸರ್ಕಾರಿ ಪ್ರೌಢಶಾಲೆ, ಖೋ ಖೋ ಬಾಲಕಿ/ಬಾಲಕರ ವಿಭಾಗದಲ್ಲಿ ಕಾಶೆಂಪುರ್‌ ಸರ್ಕಾರಿ ಪ್ರೌಢಶಾಲೆ, ವಾಲಿಬಾಲ್‌ ಬಾಲಕರ ವಿಭಾಗದಲ್ಲಿ ಡಿವೈಇಎಸ್‌ ನೆಹರೂ ಕ್ರೀಡಾಂಗಣ, ಬಾಲಕಿಯರ ವಿಭಾಗದಲ್ಲಿ ನಿಡವಂಚಾ ಎಸ್‌.ಬಿ.ಶೇರಿಕಾರ ಶಾಲೆ ತಂಡ ಜಯ ಗಳಿಸಿತ್ತು ಎಂದು ತಿಳಿಸಿದ್ದಾರೆ.

ಭಾಲ್ಕಿ ತಾಲ್ಲೂಕು ಮಟ್ಟದ ಕಬಡ್ಡಿ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಜ್ಯಾಂತಿ ಸರ್ಕಾರಿ ಪ್ರೌಢಶಾಲೆ ತಂಡ, ಖೋ ಖೋ ಬಾಲಕರ ವಿಭಾಗದಲ್ಲಿ ಭಾಲ್ಕಿ ಶಿವಾಜಿ ಪದವಿಪೂರ್ವ ಕಾಲೇಜು ತಂಡ, ಬಾಲಕಿಯರ ವಿಭಾಗದಲ್ಲಿ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ, ವಾಲಿಬಾಲ್‍ ಬಾಲಕರ ವಿಭಾಗದಲ್ಲಿ ನಿಟ್ಟೂರ (ಬಿ) ವೀರಭದ್ರೇಶ್ವರ ಪ್ರೌಢಶಾಲೆ, ಬಾಲಕಿಯರ ವಿಭಾಗದಲ್ಲಿ ಕರಡ್ಯಾಳ ಚನ್ನಬಸವೇಶ್ವರ ಗುರು ತಂಡ ಜಯ ಗಳಿಸಿತ್ತು. ಔರಾದ್‌ ತಾಲ್ಲೂಕು ಮಟ್ಟದ ಕಬಡ್ಡಿಯಲ್ಲಿ ಬಾಲಕರ ವಿಭಾಗದಲ್ಲಿ ಅಮರೇಶ್ವರ ಪ್ರೌಢಶಾಲೆ, ಬಾಲಕಿಯರ ವಿಭಾಗದಲ್ಲಿ ಎಕಂಬಾ ಸರ್ಕಾರಿ ಪ್ರೌಢಶಾಲೆ, ಖೋ ಖೋ ಬಾಲಕರ ವಿಭಾಗದಲ್ಲಿ ಕೌಡಗಾಂವ ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ವಿಭಾಗದಲ್ಲಿ ನಾಗಮಾರಪಳ್ಳಿ ಸರ್ಕಾರಿ ಪ್ರೌಢಶಾಲೆ, ವಾಲಿಬಾಲ್‌ನಲ್ಲಿ ಬಾಲಕ/ಬಾಲಕಿಯರ ವಿಭಾಗದಲ್ಲಿ ಧೂಮತಮಹಾಗಾಂವ ಸರ್ಕಾರಿ ಪ್ರೌಢಶಾಲೆ ತಂಡಗಳು ಗೆದ್ದು ಬೀಗಿವೆ ಎಂದು ಮಾಹಿತಿ ನೀಡಿದ್ದಾರೆ.

ಚಿಟಗುಪ್ಪ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಕಬಡ್ಡಿ ಬಾಲಕರ ವಿಭಾಗದಲ್ಲಿ ಚಿಟಗುಪ್ಪದ ಜ್ಞಾನಗಂಗಾ ಪ್ರೌಢ ಶಾಲೆ‌, ಬಾಲಕಿಯರ ವಿಭಾಗದಲ್ಲಿ ವಳಖಿಂಡಿ ಸರ್ಕಾರಿ ಪ್ರೌಢಶಾಲೆ, ಖೋ ಖೋ ಬಾಲಕರ ವಿಭಾಗದಲ್ಲಿ ಚಿಟಗುಪ್ಪ ಸದ್ಭೋಧಿನಿ ಪ್ರೌಢ ಶಾಲೆ, ಬಾಲಕಿಯರಲ್ಲಿ ಚಿಟಗುಪ್ಪದ ಜ್ಞಾನ ದರ್ಶನ ಪ್ರೌಢ ಶಾಲೆ, ವಾಲಿಬಾಲ್‍ ಬಾಲಕರ ವಿಭಾಗದಲ್ಲಿ ಬೇಮಳಖೇಡಾ ಕರ್ನಾಟಕ ಪಬ್ಲಿಕ್ ಶಾಲೆ, ಬಾಲಕಿಯರ ವಿಭಾಗದಲ್ಲಿ ಚಿಟಗುಪ್ಪದಲಿ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಮಕ್ಕಳು ಉತ್ತಮ ಸಾಧನೆ ತೋರಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಹುಮನಾಬಾದ್‌ ತಾಲ್ಲೂಕುಮಟ್ಟದ ಸ್ಪರ್ಧೆಯಲ್ಲಿ ಕಬಡ್ಡಿ ಬಾಲಕ/ಬಾಲಕಿಯರ ವಿಭಾಗದಲ್ಲಿ ಹುಮನಾಬಾದಿನ ವಿಶ್ವಭಾರತಿ ಪ್ರೌಢಶಾಲೆ, ಖೋ ಖೋ ಬಾಲಕರ ವಿಭಾಗದಲ್ಲಿ ಕುಮಾರಚಿಂಚೋಳಿ ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ವಿಭಾಗದಲ್ಲಿ ಅದೇ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆ, ವಾಲಿಬಾಲ್ ಬಾಲಕರ ವಿಭಾಗದಲ್ಲಿ ಘಾಟಬೋರಾಳ ಪ್ರಕಾಶ ವಿದ್ಯಾಲಯ ಗೆದ್ದು ಬೀಗಿದೆ. ಕಮಲನಗರ ತಾಲ್ಲೂಕು ಸ್ಪರ್ಧೆಯಲ್ಲಿ ಕಬಡ್ಡಿಯಲ್ಲಿ ಮುಧೋಳ ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ವಿಭಾಗದಲ್ಲಿ ಕಮಲನಗರ ಎಸ್‌.ವಿ. ಜ್ಯೂನಿಯರ್‌ ಕಾಲೇಜು, ಖೋ ಖೋ ಬಾಲಕರ ವಿಭಾಗದಲ್ಲಿ ಕಮಲನಗರದ ಪ್ರಧ್ಯಾ ಭರಮ್‌ ಪ್ರೌಢಶಾಲೆ, ಬಾಲಕಿಯರ ವಿಭಾಗದಲ್ಲಿ ಹುಲಸೂರಿನ ಸಿ.ಎಚ್‌. ಪ್ರೌಢಶಾಲೆ, ವಾಲಿಬಾಲ್‌ ಬಾಲಕರ ವಿಭಾಗದಲ್ಲಿ ಕಮಲನಗರದ ಎಸ್‌.ವಿ. ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಸವಕಲ್ಯಾಣ ತಾಲ್ಲೂಕು ಮಟ್ಟದ ಕಬಡ್ಡಿ ಬಾಲಕರ ವಿಭಾಗದಲ್ಲಿ ಹುಲಸೂರಿನ ಜೈ ಹನುಮಾನ ಕ್ಲಬ್‌, ಬಾಲಕಿಯರ ವಿಭಾಗದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ, ಖೋ ಖೋ ಬಾಲಕ/ಬಾಲಕಿಯರ ವಿಭಾಗದಲ್ಲಿ ರಾಜೇಶ್ವರದ ಡಾ.ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ, ವಾಲಿಬಾಲ್‌ ಬಾಲಕರ ವಿಭಾಗದಲ್ಲಿ ಬಸವಕಲ್ಯಾಣದ ಬಸವೇಶ್ವರ ಸಿಬಿಎಸ್ಸಿ, ಬಾಲಕಿಯರ ವಿಭಾಗದಲ್ಲಿ ರಾಜೋಳದ ಸರ್ಕಾರಿ ಪ್ರೌಢಶಾಲೆ ಮಕ್ಕಳು ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.

ಮೋದಿ ಭೇಟಿ ಮಾಡಿದ ಕೇಂದ್ರ ಸಚಿವ ಖೂಬಾ

ಬೀದರ್‌: ಕೇಂದ್ರ ಸಚಿವ ಭಗವಂತ ಖೂಬಾ ಅವರು ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಾಲೋಚಿಸಿದರು. ‘ಕುಟುಂಬ ಸದಸ್ಯರೊಂದಿಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವ ಅವಕಾಶ ಒಲಿದು ಬಂತು. ಕ್ಷೇತ್ರದ ಅಭಿವೃದ್ಧಿ ಜನರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಮೋದಿಯವರು ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾತುಗಳಿಂದ ನನ್ನ ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಿಸಿದೆ’ ಎಂದು ಭಗವಂತ ಖೂಬಾ ತಿಳಿಸಿದ್ದಾರೆ. ಖೂಬಾ ಅವರ ಪತ್ನಿ ಶೀಲಾ ಖೂಬಾ ಮಕ್ಕಳಾದ ಅಶುತೋಷ ಖೂಬಾ ವಸುಂಧರಾ ಖೂಬಾ ಮಣಿಕರ್ಣಿಕಾ ಖೂಬಾ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT