ಶುಕ್ರವಾರ, ಜುಲೈ 30, 2021
23 °C

ಮಮ್ಮಾರಿಂದ ಅಧ್ಯಾತ್ಮ ಲೋಕದಲ್ಲಿ ಅಚ್ಚಳಿಯದ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಜೀವನದಲ್ಲಿ ಸಂಪಾದಿಸಿದ ಅಪಾರ ಜ್ಞಾನಾಮೃತವನ್ನು ಇತರರಿಗೆ ಧಾರೆ ಎರೆದ ಮಮ್ಮಾ ಅವರು ಸರಸ್ವತಿ ರೂಪದಲ್ಲಿ ಗುರುತಿಸಿಕೊಂಡಿದ್ದಾರೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಪ್ರತಿಮಾ ಬಹೆನ್‍ಜಿ ಹೇಳಿದರು.

ಇಲ್ಲಿಯ ಜನವಾಡ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಗುರುವಾರ ನಡೆದ ಜಗದಂಬಾ ಸರಸ್ವತಿ ಸುಪ್ತ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘1936ರಲ್ಲಿ ಆರಂಭವಾದ ಬ್ರಹ್ಮಕುಮಾರಿ ಕೇಂದ್ರದ ಯಜ್ಞಮಾತೆಯಾಗಿ ಕಾರ್ಯನಿರ್ವಹಿಸಿದ ಮಾತಾ ಜಗದಂಬಾ ಸರಸ್ವತಿ ಅವರು ಅಧ್ಯಾತ್ಮ ಲೋಕದಲ್ಲಿ ಅಚ್ಚಳಿಯದಂತಹ ಕಾರ್ಯ ಮಾಡಿದ್ದಾರೆ’ ಎಂದು ಬಣ್ಣಿಸಿದರು.

ಕೇಂದ್ರದ ಹಿರಿಯ ಪ್ರವರ್ತಕಿ ಬಿ.ಕೆ ಗುರುದೇವಿ ಬಹೆನ್ ಮಾತನಾಡಿ, ‘ವಿಸ್ತಾರವಾದುದ್ದನ್ನು ಸಂಕ್ಷಿಪ್ತಗೊಳಿಸಿ ಸಾರ ರೂಪದಲ್ಲಿ ಪ್ರಚುರಪಡಿಸುವ ಶಕ್ತಿ ಮಮ್ಮಾ ಅವರಿಗೆ ಇತ್ತು. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಂಘಟನೆಯ ಜವಾಬ್ದಾರಿ ನಿಭಾಯಿಸಿ ಪ್ರತಿಯೊಬ್ಬರಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ, ಮಮತೆ ತೋರುವ ಮೂಲಕ ತಾಯಿ ಸ್ವರೂಪಿಯಾಗಿ ಗುರುತಿಸಿಕೊಂಡಿದ್ದರು’ ಎಂದರು.

ಕೇಂದ್ರದ ಸಹೋದರ, ಸಹೋದರಿಯರು, ಈಶ್ವರೀಯ ವಿದ್ಯಾರ್ಥಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.