ಹುಮನಾಬಾದ್ (ಬೀದರ್): ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಆರು ಜನ ಗಾಯಗೊಂಡಿದ್ದಾರೆ.

ಗ್ರಾಮದ ಜಬ್ಬಾರ್ ರಜಾಕ್ (60), ಅನ್ವರ್ ಜಮೀರ್ ಸಾಬ್ (19), ಬುಸೇರಾ ಅಲ್ಲಾವುದ್ದೀನ್ (4), ಆರೀಜ್ ರಜಾಕ್ ಸಾಬ್ (4), ಅರ್ಜಾನ್ ರಜಾಕ್ (7) ಹಾಗೂ ಮಸ್ತಾನ್ ಮುಸಾ (8) ಗಾಯಗೊಂಡವರು. ನಾಲ್ವರು
ಮಕ್ಕಳನ್ನು ಜಿಲ್ಲೆಯ ಬ್ರಿಮ್ಸ್ಗೆ ದಾಖಲಿಸಲಾಗಿದೆ.

ಜಬ್ಬಾರ್ ಹಾಗೂ ಅನ್ವರ್ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕ್ರಮವಾಗಿ ಹೈದರಾಬಾದ್ ಮತ್ತು ಸೋಲಾಪುರ →ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವರ್ಷದಲ್ಲಿ ಐದನೇ ಸ್ಫೋಟ

ಮೋಳಕೇರಾದಲ್ಲಿ ಕಳೆದ ಒಂದು ವರ್ಷದಲ್ಲಿ ಐದು ಬಾರಿ ಸ್ಫೋಟಗಳು ಸಂಭವಿಸಿವೆ. ಈ ಹಿಂದೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇಂತಹ ಸ್ಫೋಟಗಳಿಗೆ ಕಾರಣ ತಿಳಿಯಲು ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತ ಬಂದಿದ್ದಾರೆ.

ಸ್ಫೋಟಕ ಸಂಗ್ರಹಿಸಿದ ಅನುಮಾನ

ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇರುವ ಮೋಳಕೇರಾ ಗ್ರಾಮದ ಮನೆಯೊಂದರ ಬಳಿಯೇ ಸತತವಾಗಿ ಸ್ಫೋಟ ಸಂಭವಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ‘ಪೇಂಟಿಂಗ್ ಕೆಲಸ ಮಾಡುವ ವ್ಯಕ್ತಿಯೊಬ್ಬರು ಬ್ಯಾರಲ್ನಲ್ಲಿ ಪೇಂಟ್ ಹಾಗೂ ಇತರೆ ರಾಸಾಯನಿಕಗಳು ಸಂಗ್ರಹಿಸಿದ ಮಾಹಿತಿಯಿದ್ದು, ಅದರಿಂದಲೇ ಸ್ಫೋಟ ಸಂಭವಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.