ಮಾದಕ ದ್ರವ್ಯದ ದುಷ್ಪರಿಣಾಮ: ಜಾಗೃತಿ ಜಾಥಾ

7

ಮಾದಕ ದ್ರವ್ಯದ ದುಷ್ಪರಿಣಾಮ: ಜಾಗೃತಿ ಜಾಥಾ

Published:
Updated:
Prajavani

ಬೀದರ್: ಜಿಲ್ಲಾ ಪೊಲೀಸ್ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತ ಜಾಗೃತಿ ಜಾಥಾ ನಡೆಯಿತು.

ಅಂಬೇಡ್ಕರ್‌ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಜಾಥಾಕ್ಕೆ ಚಾಲನೆ ನೀಡಿದರು. ಅಲ್ಲಿಂದ
ಪ್ರಮುಖ ಮಾರ್ಗಗಳ ಮೂಲಕ ಜಾಥಾ ಝೀರಾ ಫಂಕ್ಷನ್ ಹಾಲ್‌ಗೆ ತಲುಪಿ ಸಮಾರೋಪಗೊಂಡಿತು.

‘ವಾಹನಗಳಲ್ಲಿ ಅಧಿಕ ಭಾರ, ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯದಿರಿ, ಹೆಲ್ಮೇಟ್ ಧರಿಸಿ ಪ್ರಾಣ, ಉಳಿಸಿ, ಅತಿವೇಗದ ಪ್ರಯಾಣ ಅಪಘಾತಕ್ಕೆ ಆಹ್ವಾನ, ವಾಹನ ಚಲಾಯಿಸುವಾಗ ಮೊಬೈಲ್ ಬಳಸದಿರಿ ಎಂಬಿತ್ಯಾದಿ ಘೋಷಣಾ ಫಲಕಗಳು ಜಾಥಾದಲ್ಲಿ ಗಮನ ಸೆಳೆದವು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಬೀದರ್‌ ಡಿವೈಎಸ್‌ಪಿ ಎಸ್.ವೈ.ಹುಣಸಿಕಟ್ಟಿ, ಪಿಸಿಐಬಿ ಘಟಕದ ಪೊಲೀಸ್‌ ಇನ್‌ಸ್ಪೆಕ್ಟರ್‌ ಸತೀಶ ಕಾಂಬಳೆ, ಧಾರವಾಡದ ಉತ್ತರ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ್‌, ಬೀದರ್ ಅಂಚೆ ಅಧೀಕ್ಷಕ ವಿ.ಎಸ್.ಎಲ್.ನರಸಿಂಹರಾವ್, ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ್ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !