ಚಿಟಗುಪ್ಪ: ‘ಜವಾಹರಲಾಲ್ ನೆಹರೂ ಅವರ ಚಿಂತನೆಗಳು ಎಲ್ಲರಿಗೂ ಮಾದರಿ’ ಎಂದು ಮುಖ್ಯಶಿಕ್ಷಕ ಧರ್ಮಪಾಲ್ ಹೇಳಿದರು.

ತಾಲ್ಲೂಕಿನ ಚಾಂಗಲೇರಾದ ಸರ್ಕಾರಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅವರು ಉತ್ತಮ ವ್ಯಕ್ತಿಯಾದ ಕಾರಣ ಮಕ್ಕಳ ಹೆಸರಿನಲ್ಲಿ ತಮ್ಮ ಜನ್ಮದಿನ ಆಚರಿಸಲು ಕರೆ ನೀಡಿದರು ಎಂದರು.

ಕಾರ್ಯಕ್ರಮದಲ್ಲಿ ಅಣ್ಣಾಬಾವು ಸಾಠೆ ನ್ಯಾಸ್‌ನಿಂದ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು.

ಸಿಬ್ಬಂದಿ ಪ್ರಭು ಭೂಮಾಕ್, ಶಿವಕುಮಾರ್ ಹೂಗಾರ, ರಾಜಪ್ಪ ಸಾಗರ್, ಮಲ್ಲಯ್ಯ ಸ್ವಾಮಿ, ಭುವನೇಶ್ವರಿ, ಕವಿತಾ, ರೈಚಲರಾಣಿ, ಎಂ.ಎಂ.ಮನೋಹರ್ ಮತ್ತು ಪಾಲಕರು ಇದ್ದರು. ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಕರಕನಳ್ಳಿ: ತಾಲ್ಲೂಕಿನ ಕರಕನಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ವಿಠಲರೆಡ್ಡಿ ನೆಹರೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಮಾಲೆ ಅರ್ಪಿಸಿದರು. ಸಿಬ್ಬಂದಿ, ಶಾಲಾ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಇದ್ದರು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.