ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದಿಂದ ಶಾಂತಿ, ನೆಮ್ಮದಿ: ಪ್ರೊ. ಎಸ್.ವಿ.ಕಲ್ಮಠ

Last Updated 25 ಆಗಸ್ಟ್ 2021, 8:04 IST
ಅಕ್ಷರ ಗಾತ್ರ

ಬೀದರ್: ಸಂಗೀತದಿಂದ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪ್ರೊ. ಎಸ್.ವಿ.ಕಲ್ಮಠ ನುಡಿದರು.

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ವತಿಯಿಂದ ನಗರದ ಗುಂಪಾದ ಹೇಮರಡ್ಡಿ ಮಲ್ಲಮ್ಮ ಲೇಔಟ್‍ನ ವೀರಭದ್ರೇಶ್ವರ ನಿಲಯದಲ್ಲಿ ನಡೆದ ಮನೆಗೊಂದು ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಪಿಎಸ್‍ಐ ಚಂದ್ರಕಾಂತ ಹುಲಸೂರೆ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ಬಿರಾದಾರ, ಸಂಗೀತ ಶಿಕ್ಷಕಿ ಶಾಂಭವಿ ಕಲ್ಮಠ, ವಿಜಯಕುಮಾರ ಭೋಗಲೆ, ರಮೇಶ, ಶರಣಪ್ಪ, ರಾಜೇಶ್ವರಿ, ಪಂಚಾಕ್ಷರಿ ಉಪಸ್ಥಿತರಿದ್ದರು. ದಿಲೀಪ್ ಹುಲಸೂರೆ ಸ್ವಾಗತಿಸಿದರು. ವೀರಭದ್ರಪ್ಪ ಉಪ್ಪಿನ್ ನಿರೂಪಿಸಿದರು. ಸಂಗೀತಾ ವಂದಿಸಿದರು.

ಕಲಾವಿದ ಶಿವಕುಮಾರ ಪಾಂಚಾಳ ಸಂಗೀತ ಭಜನೆ ನಡೆಸಿಕೊಟ್ಟರು. ಮಾನಸ, ಆದಿತ್ಯ ಸಹ ಗಾಯನ ಮಾಡಿದರು. ಸಂಗಮೇಶ ತಬಲಾ ವಾದನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT