ಶನಿವಾರ, ಆಗಸ್ಟ್ 8, 2020
23 °C
484ಕ್ಕೆ ಏರಿದ ಸೋಂಕಿತರ ಸಂಖ್ಯೆ: ಹೆಚ್ಚಿದ ಆತಂಕ

ಬೀದರ್: ಒಂದೇ ದಿನ 73 ಜನರಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಕೋವಿಡ್ 19 ಸೋಂಕು ಶನಿವಾರ ಜಿಲ್ಲೆಗೆ ದೊಡ್ಡ ಆಘಾತ ನೀಡಿದೆ. ಒಂದೇ ದಿನ 73 ಮಂದಿಗೆ ಸೋಂಕು ದೃಢಪಟ್ಟಿದೆ. ಇಬ್ಬರು ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ವೈರಾಣು ಪೀಡಿತರ ಸಂಖ್ಯೆ 484ಕ್ಕೆ ತಲುಪಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ.

ಬೀದರ್ ತಾಲ್ಲೂಕಿನ 32, ಚಿಟಗುಪ್ಪದ 28, ಹುಮನಾಬಾದ್‍ನ ಹಾಗೂ ಬಸವಕಲ್ಯಾಣ ತಾಲ್ಲೂಕಿನ 3 ಮಂದಿಗೆ ಸೋಂಕು ದೃಢಪಟ್ಟಿದೆ. ಬೀದರ್‌ನಲ್ಲಿ ಒಬ್ಬ ಸೋಂಕಿತರ ಸಂಪರ್ಕದಿಂದ 16 ಮಂದಿಗೆ ಕೋವಿಡ್ 19 ವೈರಾಣು ತಗುಲಿದೆ.

ಜ್ವರ, ಉಸಿರಾಟದ ತೊಂದರೆಯಿಂದ ಗುರುವಾರ(ಜೂ.18) ಬ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದ 65 ವರ್ಷದ ವ್ಯಕ್ತಿ ಚಿಕಿತ್ಸೆ ಫಲಿಸದೆ ಅದೇ ದಿನ ಮೃತಪಟ್ಟಿದ್ದಾರೆ. ಬುಧವಾರ (ಜೂ. 17) ಬ್ರಿಮ್ಸ್‌ಗೆ ದಾಖಲಿಸಲಾಗಿದ್ದ ಕಲಬುರ್ಗಿಯ ಬಸವೇಶ್ವರ ನಗರದ 51 ಮಹಿಳೆ ಶುಕ್ರವಾರ ಸಾವಿಗೀಡಾಗಿದ್ದಾರೆ. ಇಬ್ಬರ ಕೋವಿಡ್ 19 ತಪಾಸಣಾ ವರದಿ ಪಾಸಿಟಿವ್ ಬಂದಿದೆ.

ಶನಿವಾರ ಗುಣಮುಖರಾದ 12 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈವರೆಗೆ ಒಟ್ಟು 266 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗಳಿಗೆ ತೆರಳಿದ್ದಾರೆ. ಗಂಟಲು ದ್ರವ ಮಾದರಿ ಪಡೆದ 1,45 ಜನರ ವೈದ್ಯಕೀಯ ವರದಿ ಬರಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.