ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಪ್ರೀತಿ ತಂದ 10 ಚಿನ್ನದ ಪದಕ

Last Updated 17 ಜನವರಿ 2020, 10:10 IST
ಅಕ್ಷರ ಗಾತ್ರ

ಬೀದರ್‌: ‘ಸಾಕು ಪ್ರಾಣಿಗಳ ಮೇಲಿನ ಅತಿಯಾದ ಪ್ರೀತಿ ನನ್ನನ್ನು ಪಶು ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಿತು. ಹೀಗಾಗಿ ಪಶು ವೈದ್ಯೆ ಆದೆ’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 10 ಚಿನ್ನದ ಪದಕಗಳಿಗೆ ಭಾಜನರಾಗಲಿರುವ ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ಶ್ರುತಿ ವಾಲ್ಸನ್‌ ತಿಳಿಸಿದರು.

ಶ್ರುತಿ ಮೂಲತಃ ಕೇರಳದ ತ್ರಿಶೂರ್‌ದವರು. ನಿವೃತ್ತ ಪ್ರಾಧ್ಯಾಪಕ ವಾಲ್ಸನ್‌ ಮಾಧವನ್‌ ವಡಕ್ಕಥ್ ಹಾಗೂ ಮೀನಾ ಅವರ ಮಗಳು. ಸಹೋದರಿ ಸ್ರುತಿ ವಾಲ್ಸನ್ ಅವರು ಆಯುರ್ವೇದ ತಜ್ಞೆಯಾಗಿದ್ದಾರೆ.

‘ಮುಂಬೈನ ಕ್ಯಾನೊಸಾ ಕಾನ್ವೆಂಟ್‌ನಲ್ಲಿ 4ನೇ ತರಗತಿವರೆಗೆ ಓದಿದೆ. ನಂತರ ತಂದೆಯೊಂದಿಗೆ ಬೆಂಗಳೂರಿಗೆ ಬಂದು ಎಸ್ಸೆಸ್ಸೆಲ್ಸಿವರೆಗೆ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಓದಿ ಸಿಜಿಪಿಎ 9.6 ಅಂಕ ಪಡೆದೆ. ನಾರಾಯಣ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿ ಹಾಸನದ ಪಶು ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಿರುವೆ’ ಎಂದು ಶ್ರುತಿ ತಿಳಿಸಿದರು.

‘ನನ್ನ ಪಾಲಕರಿಗೂ ಸಾಕು ಪ್ರಾಣಿಗಳ ಬಗ್ಗೆ ಗೌರವ ಇದೆ. ನನ್ನ ಆಯ್ಕೆವನ್ನು ಅವರು ಪ್ರೀತಿಯಿಂದ ಸಮರ್ಥಿಸಿಕೊಂಡರು. ಪ್ರಾಣಿಗಳ ಮೇಲಿನ ಪ್ರೀತಿ ನನಗೆ 10 ಚಿನ್ನದ ಪದಕಗಳನ್ನು ತಂದುಕೊಂಡಿದೆ’ ಎಂದು ಹೆಮ್ಮೆಯಿಂದ ಹೇಳಿದರು.

‘ಪಾಲಕರ ಬೆಂಬಲದಿಂದಾಗಿ ನಾನು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇನೆ. ವೃತ್ತಿ ಜೀವನದಲ್ಲೂ ಯಶಸ್ಸು ಕಾಣಲಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT