ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾ ಒಂದು ಸಸಿ ನೆಡಿ: ಸಸಿ ನೆಡುವ ಕಾರ್ಯಕ್ರಮದಲ್ಲಿ ಡಾ.ನಿತೇಶಕುಮಾರ ಬಿರಾದಾರ ಸಲಹೆ

Last Updated 26 ಜುಲೈ 2021, 15:18 IST
ಅಕ್ಷರ ಗಾತ್ರ

ಬೀದರ್: ಪರಿಸರ ಸಮತೋಲನ ಕಾಪಾಡಲು ಸಾರ್ವಜನಿಕರು ತಲಾ ಒಂದು ಸಸಿ ನೆಡಬೇಕು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ.ನಿತೇಶಕುಮಾರ ಬಿರಾದಾರ ಸಲಹೆ ಮಾಡಿದರು.

ತಾಲ್ಲೂಕಿನ ಚಿಟ್ಟಾ ಗ್ರಾಮದ ನವೀನ್ ಪಬ್ಲಿಕ್ ಶಾಲೆಯಲ್ಲಿ ಕ್ಲಬ್ ವತಿಯಿಂದ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚು ಹೆಚ್ಚು ಸಸಿಗಳನ್ನು ನೆಡುವುದರಿಂದ ಶುದ್ಧ ಗಾಳಿ ದೊರಕುತ್ತದೆ. ಸಕಾಲಕ್ಕೆ ಮಳೆ ಆಗುತ್ತದೆ. ಸಮೃದ್ಧ ಬೆಳೆಯೂ ಬರುತ್ತದೆ ಎಂದು ತಿಳಿಸಿದರು.

ಸದ್ಯ ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಗೆ ಅರಣ್ಯ ನಾಶವೇ ಕಾರಣವಾಗಿದೆ ಎಂದು ಹೇಳಿದರು.

ನವೀನ್ ಪಬ್ಲಿಕ್ ಶಾಲೆ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಮಾತನಾಡಿ, ಮನುಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಹಸಿರು ಪ್ರೀತಿ ಬೆಳೆಸಿಕೊಳ್ಳಬೇಕು. ಮನೆ ಅಂಗಳ, ಸಾರ್ವಜನಿಕ ಸ್ಥಳ, ರಸ್ತೆ ಬದಿಗಳಲ್ಲಿ ಸಸಿ ನೆಟ್ಟು ಪೋಷಿಸಬೇಕು ಎಂದರು.

ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ಕ್ಲಬ್‍ನ ಸತೀಶ್ ಸ್ವಾಮಿ, ಸಚ್ಚಿದಾನಂದ ಚಿದ್ರೆ, ರಾಜಕುಮಾರ ಅಳ್ಳೆ, ಶಿವಕುಮಾರ ಪಾಟೀಲ, ಓಂಕಾರ ಪಸರಗೆ, ಗುರುನಾಥ ಮೂಲಗೆ, ನಾಗರಾಜ ಜೋಗಿ, ಶಶಿಕಾಂತ ಹೊಸದೊಡ್ಡೆ, ರಾಮಕೃಷ್ಣ ಎಸ್, ಕಲ್ಪನಾ ದೇಶಪಾಂಡೆ, ಡಾ.ಶರಣ ಬುಳ್ಳಾ, ಡಾ.ಲೋಕೇಶ ಹಿರೇಮಠ, ಡಾ.ಉಮೇಶ ಮಾಲಿಪಾಟೀಲ ಇದ್ದರು.

ಶ್ರೀಗಂಧ, ಮಾವು, ಬಾಳೆ ಸೇರಿದಂತೆ ವಿವಿಧ ಸಸಿಗಳನ್ನು ನೆಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT