ಬೀದರ್: ಪೊಲೀಸ್ ಸಮವಸ್ತ್ರ ಧರಿಸಿ, ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇರೆಗೆ ನಗರದ ಆರ್ಟಿಒ ಕಚೇರಿಯ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಆರ್ಟಿಒ ಕಚೇರಿಯ ಹೊರಗುತ್ತಿಗೆ ವಾಹನ ಚಾಲಕರಾದ ಶಿವಪುತ್ರ ಮಲ್ಲಿಕಾರ್ಜುನ, ಬಸವರಾಜ ಸಾಯಿಬಣ್ಣ ಹಾಗೂ ಗುರುರಾಜ್ ರಂಗಪ್ಪ ನ್ಯಾಯಾಂಗ ಬಂಧನಕ್ಕೆ ಒಳಗಾದವರು. ಹೊರಗುತ್ತಿಗೆ ನೌಕರರನ್ನು ಒದಗಿಸಿದ ಲಿಬ್ರಾ ಮ್ಯಾನೇಜ್ಮೆಂಟ್ ಸರ್ವೀಸೆಸ್ ಪ್ರೈವೇಟ್ ಲಿಮಿಟೆಡ್ನ ಮೇಲ್ವಿಚಾರಕ ಸೇರಿದಂತೆ ನಾಲ್ವರ ವಿರುದ್ಧ ಆರ್ಟಿಒ ಜಿ.ಕೆ. ಬಿರಾದಾರ ಅವರು ಸಲ್ಲಿಸಿದ ದೂರಿನ ಮೇರೆಗೆ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಸಮವಸ್ತ್ರ ಧರಿಸಿಕೊಂಡು ಓಡಾಡುವುದು ಸರಿಯಲ್ಲ ಎಂದು ಹೇಳಿದ್ದೆ. ಅದನ್ನು ಲೆಕ್ಕಿಸದೇ ಎಲ್ಲೆಡೆ ಪೊಲೀಸರ ಸಮವಸ್ತ್ರ ಧರಿಸಿ ಓಡಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ