ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಜನಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

Last Updated 31 ಜನವರಿ 2023, 11:30 IST
ಅಕ್ಷರ ಗಾತ್ರ

ಜನವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜಗೀರಾದ ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ, ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ವತಿಯಿಂದ ತಾಲ್ಲೂಕಿನ ತಡಪಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು.

ಶಂಕರ ಚೊಂಡಿ ಹಾಗೂ ತಂಡದ ಜನಪದ ಗೀತೆ, ಸವಿತಾ ಮತ್ತು ತಂಡದ ಬುಲಾಯಿ ಪದ, ಸುಶೀಲಮ್ಮ ಹಾಗೂ ತಂಡದ ಬುದ್ಧ-ಭೀಮ ಗೀತೆ, ಬಕ್ಕಮ್ಮ ಮತ್ತು ತಂಡದವರು ಪ್ರಸ್ತುತಪಡಿಸಿದ ಸೋಬಾನ ಪದಗಳು ಮುದ ನೀಡಿದವು. ಪಾರ್ವತಿ ಹಾಗೂ ತಂಡ ಭಜನೆ, ರಾಜಗೀರಾದ ಕಲಾವಿದರು ಡೊಳ್ಳು ಕುಣಿತ ಪ್ರದರ್ಶಿಸಿದರು.

ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್ ಉದ್ಘಾಟಿಸಿದರು. ಪ್ರಮುಖರಾದ ನರೇಶ ತುಪ್ಪದ, ಮೊಗಲಮ್ಮ ವಿಠ್ಠಲ, ವಿಜಯಕುಮಾರ ಮಡ್ಡೆ, ಸುನೀತಾ ಬನ್ನೇರ್, ಗೌಸೊದ್ದಿನ್, ದಿಲೀಪಕುಮಾರ ಭೋಸ್ಲೆ, ದಯಾನಂದ ನವಲೆ, ಸಂಜುಕುಮಾರ ನರಸಪ್ಪ, ಶಂಕರ ಮುಸ್ತರಿ, ಶಾಂತಮ್ಮ ರಾಜಪ್ಪ, ವೀರಾರೆಡ್ಡಿ ಚೀನಕೇರಿ, ಸುಭಾಷ್ ಪಾಟೀಲ ಇದ್ದರು.

ಸಂಸ್ಥೆಯ ಅಧ್ಯಕ್ಷ ಸುಧಾಕರ ರಾಜಗೀರಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ ಜಾನಕನೋರ ನಿರೂಪಿಸಿದರು. ಜಾವೇದಮಿಯ ತಡಪಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT