ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಬಹುತೇಕ ತರಕಾರಿಗಳ ಬೆಲೆ ಸ್ಥಿರ

ಚಳಿಯ ಕಾರಣ ಕೆಳಗಿಳಿಯದ ನುಗ್ಗೆಕಾಯಿ
Last Updated 10 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವಿಪರೀತ ಚಳಿ ಇದೆ. ತರಕಾರಿ ಖರೀದಿಗೆ ಜನ ಮನೆಗಳಿಂದ ಹೊರಗೆ ಬರುತ್ತಿಲ್ಲ. ಬೇಡಿಕೆ ಇರುವ ಕಾರಣ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದ್ದರೆ, ಕೆಲ ತರಕಾರಿ ಬೆಲೆ ಇಳಿದಿದೆ.

ಚಳಿಯ ಕಾರಣ ನುಗ್ಗೆಕಾಯಿ ಮಾತ್ರ ಪ್ರತಿ ಕೆಜಿಗೆ ₹ 220ರಂತೆ ಮಾರಾಟವಾಗುತ್ತಿದೆ. ಸಾರಿನ ಸ್ವಾದ ಹೆಚ್ಚಿಸುವ ಕರಿಬೇವು ಬೆಲೆ ₹ 80 ಇದೆ. ತರಕಾರಿ ರಾಜ ಸೇರಿದಂತೆ ಕೊಂಬಿನ ತರಕಾರಿಗಳು ಯುದ್ಧದಲ್ಲಿ ಸೋತ ಸೈನಿಕನಂತೆ ಮೆತ್ತಗಾಗಿವೆ. ಕೊಂಬು ಮುದುಡಿಕೊಂಡ ನಂತರ ಕೊತಂಬರಿಯ ನಖರಾ ಕಡಿಮೆಯಾಗಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಬೆಂಡೆಕಾಯಿ, ಹಿರೇಕಾಯಿ, ಚವಳೆಕಾಯಿ, ತುಪ್ಪದ ಹಿರೇಕಾಯಿ, ನುಗ್ಗೆಕಾಯಿ, ಸಬ್ಬಸಗಿ, ಕರಿಬೇವು, ಗಜ್ಜರಿ, ಬೀನ್ಸ್ ಬೆಲೆ ಸ್ಥಿರವಾಗಿದೆ.

ಕೊತಂಬರಿ ಬೆಲೆ ಪ್ರತಿಕ್ವಿಂಟಲ್‌ಗೆ ₹ 4 ಸಾವಿರ, ಬೆಳ್ಳುಳ್ಳಿ, ಹೂಕೋಸು ಬೆಲೆ ₹ 2 ಸಾವಿರ, ಟೊಮೆಟೊ, ಬದನೆಕಾಯಿ, ಡೊಣಮೆಣಸಿನಕಾಯಿ, ಸೌತೆಕಾಯಿ, ಮೆಂತೆ ಹಾಗೂ ಪಾಲಕ್ ಬೆಲೆ ₹ 1 ಸಾವಿರ ಕಡಿಮೆಯಾಗಿದೆ.

‘ಈ ವಾರವೂ ಬೆಳಗಾವಿ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಅಧಿಕ ಪ್ರಮಾಣದಲ್ಲಿ ತರಕಾರಿ ಬಂದಿರುವ ಕಾರಣ ಕೆಲ ತರಕಾರಿಗಳ ಬೆಲೆ ಕಡಿಮೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಅಭಿಪ್ರಾಯಪಡುತ್ತಾರೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಬೀನ್ಸ್, ಬೀಟ್‌ರೂಟ್‌, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಗಜ್ಜರಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ
ಈರುಳ್ಳಿ:
40-50, 40-50
ಬೆಳ್ಳುಳ್ಳಿ:40-50, 20-30
ಆಲೂಗಡ್ಡೆ:30-40,30-40
ಮೆಣಸಿನಕಾಯಿ:50-60,50-60
ಎಲೆಕೋಸು:30-40,30-40
ಹೂಕೋಸು:50-60,30-40
ಗಜ್ಜರಿ:30-40,30-40
ಬೀನ್ಸ್:30-40,30-40
ಟೊಮೆಟೊ:10-20,5-10

ಬದನೆಕಾಯಿ:30-40,20-30
ಬೆಂಡೆಕಾಯಿ:30-40,30-40
ಹಿರೇಕಾಯಿ:30-40, 30-40
ನುಗ್ಗೆಕಾಯಿ:200-220,200-220

ಡೊಣಮೆಣಸಿನ ಕಾಯಿ: 30-40,20-30
ಚವಳೆಕಾಯಿ:30-40,30-40
ಸೌತೆಕಾಯಿ:30-40,20-30
ತುಪ್ಪದ ಹಿರೇಕಾಯಿ: 30-40,30-40

ಮೆಂತೆ:20-30,10-20
ಸಬ್ಬಸಗಿ:30-40,30-40
ಕರಿಬೇವು:70-80,70-80
ಕೊತಂಬರಿ:50-60,10-20
ಪಾಲಕ್:30-40,20-30

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)
ಕಡಲೆ ಕಾಳು
– ₹ 3,900- ₹4,200
ಉದ್ದಿನ ಕಾಳು ₹ 5,300- ₹6,800
ಹೆಸರು ಕಾಳು ₹ 6,400- ₹7,500
ಜೋಳ ₹ 3,500- ₹5,000
ನುಚ್ಚು ಅಕ್ಕಿ ₹ 2,400- ₹2,800

ಅಕ್ಕಿ ₹ 4,400- ₹6,000
ಸೋಯಾಬಿನ್ ₹ 4,900- ₹5,400
ತೊಗರಿ ₹ 6,300- ₹ 7,100
ಗೋಧಿ ₹ 2,000- ₹ 3,200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT