ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಆದಾಯ ದ್ವಿಗುಣಕ್ಕೆ ಸಂರಕ್ಷಿತ ಬೇಸಾಯ ಅವಶ್ಯಕ

Last Updated 25 ಡಿಸೆಂಬರ್ 2021, 9:45 IST
ಅಕ್ಷರ ಗಾತ್ರ

ಬೀದರ್: ರೈತರ ಆದಾಯ ದ್ವಿಗುಣಕ್ಕೆ ಸಂರಕ್ಷಿತ ಬೇಸಾಯ ತಾಂತ್ರಿಕತೆ ಅವಶ್ಯಕವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಿವಕುಮಾರ ಗಾಜರೆ ತಿಳಿಸಿದರು.

ರೈತರ ದಿನಾಚರಣೆ ಪ್ರಯುಕ್ತ ನಗರದ ತೋಟಗಾರಿಕೆ ಕಾಲೇಜಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಟೊಮೆಟೊ ಹಾಗೂ ಡೊಣ ಮೆಣಸಿನಕಾಯಿ ಸಂರಕ್ಷಿತ ಬೇಸಾಯ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾತಾವರಣದಲ್ಲಿನ ಬದಲಾವಣೆ ಗಮನದಲ್ಲಿ ಇಟ್ಟುಕೊಂಡು ವಿಜ್ಞಾನಿಗಳ ಸಲಹೆ ಪಡೆದು ಕೃಷಿ ಕೈಗೊಳ್ಳಬೇಕು ಎಂದು ಕಾಲೇಜಿನ ಡೀನ್ ಡಾ. ಎಸ್.ವಿ. ಪಾಟೀಲ ಹೇಳಿದರು.

ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಕೃಷಿ ಕ್ಷೇತ್ರದ ಪಾತ್ರ ಮುಖ್ಯವಾಗಿದೆ ಎಂದು ತಿಳಿಸಿದರು.

ಹುಮನಾಬಾದ್ ತಾಲ್ಲೂಕಿನ ಚಂದನಹಳ್ಳಿಯ ಪ್ರಗತಿಪರ ರೈತ ಚಂದ್ರಶೇಖರ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ತೋಟಗಾರಿಕೆ ಸಹಾಯಕ ನಿರ್ದೇಶಕ ನೀಲಾಂಜನ್, ಪಾಧ್ಯಾಪಕ ಡಾ. ಮುಹಮ್ಮದ್ ಫಾರೂಕ್, ಡಾ.ಅಶೋಕ ಸೂರ್ಯವಂಶಿ, ಡಾ. ಕಾವಳೆ ನಾಗೇಂದ್ರ, ಡಾ. ಅರುಣಕುಮಾರ ಕೆ.ಟಿ, ಡಾ. ಅಂಬ್ರೇಶ್, ಡಾ. ಗಣೇಶಗೌಡ ಐ. ಪಾಟೀಲ, ಡಾ. ವಿ.ಪಿ. ಸಿಂಗ್, ಡಾ. ಬಸಪ್ಪ ಎಸ್. ಕಾಂಬಳೆ, ಡಾ. ಶಶಿಧರ ಕೆ. ಚವಾಣ್, ಡಾ. ಪ್ರಶಾಂತ, ಡಾ. ಶ್ರೀನಿವಾಸ ಎನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT