ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ: ಗುಡುಗು ಮಿಂಚು ಸಹಿತ ಮಳೆ

Published 11 ಏಪ್ರಿಲ್ 2024, 16:15 IST
Last Updated 11 ಏಪ್ರಿಲ್ 2024, 16:15 IST
ಅಕ್ಷರ ಗಾತ್ರ

ಹುಲಸೂರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಗುಡುಗು ಮಿಂಚು ಸಹಿತ ಮಳೆ ಸುರಿದಿದ್ದು ಸಂಜೆವರೆಗೂ ಮೋಡಕವಿದ ವಾತಾವರಣ ಇತ್ತು.

ಮಧ್ಯಾಹ್ನ 4 ಗಂಟೆ ಸುಮಾರಿಗೆ ಒಂದೂ ಗಂಟೆ ಮಳೆ ಸುರಿಯಿತು. ನಂತರ ಕೆಲ ಕಾಲ ಬಿಡುವು ನೀಡಿ, ಸಂಜೆ ಸುಮಾರಿಗೆ ತಣ್ಣನೆ ಗಾಳಿ ಬೀಸಿತು. ಸೆಕೆಯನ್ನೇ ಕಂಡಿದ್ದ ತಾಲ್ಲೂಕು ಜನತೆಗೆ ಮಳೆಗಾಲದ ಅನುಭವವಾಯಿತು.ಕಪ್ಪಾದ ಮೋಡ ಹುಟ್ಟಿಕೊಂಡಿದ್ದರೂ, ಗುಡುಗು- ಸಿಡಿಲಿನ ಆರ್ಭಟವಿದ್ದರೂ ಭಾರಿ ಪ್ರಮಾಣದ ಮಳೆ ಮಾತ್ರ ಬರಲಿಲ್ಲ.

ಮುಚಳಂಬ, ಅಳವಾಯಿ, ತುಗಾಂವ (ಎಚ್), ಮಿರಕಲ, ಗಡಿಗೌಡಗಾಂವ, ವಾಂಝರಾಖೆಡ್, ಮೆಹಕರ, ಬೇಲೂರ ಸೇರಿದಂತೆ ಇತರೆಡೆ ಅರ್ಧ ತಾಸು ಜೋರಾದ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT