ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖಿ ಸಂಸಾರಕ್ಕೆ ರಾಮಾಯಣ ಆಲಿಸಿ: ಸಮಾಧಾನಜಿ ಸ್ವಾಮೀಜಿ

Last Updated 6 ಜನವರಿ 2022, 3:57 IST
ಅಕ್ಷರ ಗಾತ್ರ

ಭಾಲ್ಕಿ: ‘ಸಂಕುಚಿತ ಭಾವನೆ ತೊರೆದು ವಿಶಾಲ ಭಾವನೆ ಬೆಳೆಸಿ ಸುಖಿ ಮತ್ತು ಆನಂದದ ಸಂಸಾರ ನಡೆಸಲು ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣ ಆಲಿಸಬೇಕು’ ಎಂದು ಭೀಡ ಜಿಲ್ಲೆಯ ಕೆಜದ ಶ್ರೀ ಸಮಾಧಾನಜಿ ಮಹಾರಾಜರು ಪ್ರತಿಪಾದಿಸಿದರು. ಇಲ್ಲಿನ(ಬಾಲಾಜಿ) ರಾಮ ಮಂದಿರದಲ್ಲಿ ಮಾರವಾಡಿ ಸಮಾಜ ವತಿಯಿಂದ ಆಯೋಜಿಸಿದ್ದ ಶ್ರೀ ದಿವ್ಯ ರಾಮಕಥಾ ಶ್ರಾವಣಾಂಮೃತ ಕಾರ್ಯಕ್ರಮದಲ್ಲಿ ರಾಮಾಯಣದ ವನ ಗಮನ ಮತ್ತು ಕೇವಟ ಪ್ರವಚನ ಕುರಿತು ಪ್ರವಚನ ನೀಡಿದರು.

ದಶರಥನ ಕಂದ ರಾಮ ಪಿತೃ ವಾಕ್ಯ ಪರಿಪಾಲನೆ ಮಾಡಿ ಹೆತ್ತವರಿಗೆ ಗೌರವ ಕೊಡುವ ಸಂಸ್ಕೃತಿ ಭರತ ಖಂಡಕ್ಕೆ ಪರಿಚಯಿಸಿದನು. ರಾಮ ಮತ್ತು ಕೆವಟ್ ಹಾಗು ಭರತ ಅವಿನಾಭಾವ ಸಂಬಂಧ ಸಂವಾದದ ತುಣುಕುಗಳನ್ನು ಬಹು ಮಾರ್ಮಿಕವಾಗಿ ವಿವರಿಸಿದರು. ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು.

ಸನ್ಮಾನ: ಮಹಾಲಿಂಗ ಸ್ವಾಮೀಜಿ, ಸಿದ್ದರಾಮೇಶ್ವರ ಪಟ್ಟದ್ದೇವರು, ನಿರಂಜನ ಸ್ವಾಮೀಜಿ, ಯುವ ನಾಯಕ ಪ್ರಸನ್ ಖಂಡ್ರೆ ದಂಪತಿ, ರೈಲ್ವೆ ಬೋರ್ಡ್ ಸುರಕ್ಷತೆ ಸದಸ್ಯ ಶಿವರಾಜ ಗಂದಗೆ ಅವರನ್ನು ಸನ್ಮಾನಿಸಲಾಯಿತು. ರಾಮಾಯಣದ ಪಾತ್ರಗಳ ರೂಪದಲ್ಲಿ ರಾಮ (ಆರತಿ), ಲಕ್ಷ್ಮಣ (ನಂದಿನಿ ಬಿಯಾನಿ) ಸೀತಾ(ಪೂರ್ವ ಬಿಯಾಣಿ) ವೇಶಧಾರಿಗಳು ಸಭಿಕರ ಗಮನ ಸೆಳೆದರು. ಶ್ರೀ ವಲ್ಲಭ ಲೋಯಾ, ಪುನಮಚಂದಜಿ ತಿವಾರಿ, ರಾಧೆಶಾಮಜೀ ಲೋಯಾ, ಶ್ರೀನಾಥಜಿ ಹೇಡಾ, ಸುರೇಶಕುಮಾರ ಮಾಲಪಾಣಿ, ಸುರೇಶಚಂದಜೀ ಬಿಯಾಣಿ, ಕಿಶನಜೀ ಲೋಯಾ, ಕೈಲಾಸನಾಥಜೀ ಬಿಯಾಣಿ, ಭಗವತಿ ಪ್ರಸಾದಜೀ ಶರ್ಮಾ, ರಾಜಗೋಪಾಲಜೀ, ಜೈಕಿಶನ ಬಿಯಾನಿ, ಸಾಗರ ಮಲಾನಿ, ಜೈಕುಮಾರ ನಾಬಿಯಾ, ವಿಜಯ, ವಾಸುದೇವ ಶರ್ಮಾ, ಕೈಲಾಸನಾಥ, ಡಾ.ವಸಂತ ಪವಾರ್‌, ಡಾ.ಅಮಿತ್‌ ಅಷ್ಟೂರೆ, ನಿತಿನ್‌ ಪಾಟೀಲ, ಯೋಗೇಶ, ಶಾಂತವೀರ, ಸಾಗರ ನಾಯಕ, ಶಾಂತನು ಕುಲಕರ್ಣಿ, ಸುನಿಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT