ಹುಮನಾಬಾದ್: ‘ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆಗಳು ಹೆಚ್ಚುತ್ತಿರುವುದು ನೋವಿನ ಸಂಗತಿ. ಸತ್ಯ, ಸಂಸ್ಕೃತಿ ಪರಿಪಾಲನೆಯಿಂದ ಶಾಂತಿ, ಸಾಮರಸ್ಯ ಬೆಳೆಯಲು ಸಾಧ್ಯ’ ಎಂದು ರಂಭಾಪುರಿ ರೇಣುಕಾ ವೀರಸೋಮೇಶ್ವರ ಶಿವಾಚಾರ್ಯ ಹೇಳಿದರು.

ತಾಲ್ಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಶ್ರೀಗುರು ಸಿದ್ದೇಶ್ವರ ಸಂಸ್ಥಾನ ಚಿಕ್ಕಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಯುವ ಸಮುದಾಯದಲ್ಲಿ ಶ್ರದ್ಧೆ, ಸ್ವಾಭಿಮಾನ, ಕರ್ತವ್ಯನಿಷ್ಠೆ ಬೆಳೆಸಬೇಕಾಗಿದೆ. ಸಂಸ್ಕಾರದ ಕೊರತೆಯಿಂದ ಸಂಸ್ಕೃತಿ ವಿನಾಶದ ಅಂಚಿನಲ್ಲಿದೆ. ಇಂಥ ಸಂದರ್ಭದಲ್ಲಿ ಪುನಶ್ಚೇತನಗೊಳಿಸಿ ಧರ್ಮ ಸಂಸ್ಕೃತಿ ಎತ್ತಿ ಹಿಡಿಯುವ ಅವಶ್ಯಕತೆ ಇದೆ’ ಎಂದರು.

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ‘ಮಠಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಇಂತಹ ಉತ್ಸವಗಳು ಭಕ್ತರಲ್ಲಿ ಏಕತೆ ಮತ್ತು ಆಧ್ಯಾತ್ಮಿಕ ಚೈತನ್ಯ ಮೂಡಿಸುತ್ತವೆ’ ಎಂದರು.

ಪಂಡಿತರಾಧ್ಯ ಶಿವಾಚಾರ್ಯ, ತಡೋಳದ ರಾಜೇಶ್ವರ ಶಿವಾಚಾರ್ಯ, ಕಲಬುರಗಿಯ ರಾಜಶೇಖರ ಶಿವಾಚಾರ್ಯ, ದೇವಾಪೂರದ ಶಿವಮೂರ್ತಿ ಶಿವಾಚಾರ್ಯ, ರಾಜೇಶ್ವರದ ರುದ್ರಮುನಿ ಶಿವಾಚಾರ್ಯ, ಹುಡಗಿಯ ಚನ್ನಮಲ್ಲ ಸ್ವಾಮಿ, ನಿರಗುಡಿಯ ಹವಾಮಲ್ಲಿನಾಥ ಮಹಾರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ಉದ್ಯಮಿ ಸಂತೋಷ ಪಾಟೀಲ, ಶಿವಶರಣಪ್ಪ ಸಿರಿ, ಮಾಣಿಕಪ್ಪ ಕನಕಟ್ಟಾ, ನಾಗರಾಜ ಹಿಬಾರೆ, ಚಂದ್ರಕಾಂತ ಶಿವಮೂರ್ತಿ, ಶಿವಾನಂದ ಪಸರಗಿ, ಆಶ್ವಿನ ಮುಗನೂರ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.