ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಹುಲಸೂರ |ಮಾವಿನ ಮರಗಳಲ್ಲಿ ಹೂವಿನ ರಾಶಿ: ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಬೆಳೆಗಾರರು

ಗುರುಪ್ರಸಾದ ಮೆಂಟೇ
Published : 4 ಫೆಬ್ರುವರಿ 2024, 6:06 IST
Last Updated : 4 ಫೆಬ್ರುವರಿ 2024, 6:06 IST
ಫಾಲೋ ಮಾಡಿ
Comments
ವೈಜಯಂತಾ ಕದಮ
ವೈಜಯಂತಾ ಕದಮ
ಫಸಲಿನ ಕುರಿತು ಈಗಲೇ ಏನನ್ನೂ ಹೇಳಲಾಗದು. ಮುಂದಿನ ಹವಾ­ಮಾನ­ದ ಮೇಲೆ ಬೆಳೆ ಅವಲಂಬಿತ. ದೊಡ್ಡ ಮರವೊಂದು ಕೋಟಿಗಟ್ಟಲೆ ಹೂ ಬಿಟ್ಟರೂ ಕಾಯಾಗುವುದು ಸಾವಿರದಷ್ಟು ಮಾತ್ರ. ಕೆಲವೊಮ್ಮೆ ಮಿಡಿ ಉದುರಿದರೂ ರೈತರಿಗೆ ಆತಂಕ ಬೇಡ
-ವೈಜಯಂತಾ ಕದಮ ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ.
ಸುಮಾ ಯಾದವ
ಸುಮಾ ಯಾದವ
ಕಳೆದ ವರ್ಷವೂ ಹೂವಿನ ಪ್ರಮಾಣ ಅಧಿಕವಾಗಿತ್ತು. ಅತಿಯಾದ ಇಬ್ಬನಿ ಮೋಡ ಕವಿದ ವಾತಾವರಣದಿಂದ ಬೂದಿರೋಗ ತಗುಲಿ ನಿರೀಕ್ಷೆ ಹುಸಿಗೊಳಿಸಿತು. ಈ ವರ್ಷ ಭರಪೂರ ಹೂವು ಅರಳಿದೆ. ಅದಕ್ಕೆ ಬೆಳೆಗಾರರು ಮಾವು ಸ್ಪೆಷಲ್ ಔಷಧ ಸಿಂಪಡಣೆ ಮಾಡಿದರೆ ಕಾಯಿ ಕಟ್ಟುವ ಪ್ರಮಾಣ ಹೆಚ್ಚಾಗಬಹುದು
ಸುಮಾ ಯಾದವ ಸಹಾಯಕ ತೋಟಗಾರಿಕೆ ಅಧಿಕಾರಿ
ಇಳುವರಿ ಹೆಚ್ಚಿಸಲು ‘ಮಾವು ಸ್ಪೆಷಲ್’
ಮಾವು ಬೆಳೆಯಲ್ಲಿ ಬೋರಾನ್ ಹಾಗೂ ಸತುವಿನ ಕೊರತೆ ಮುಖ್ಯವಾಗಿ ಕಂಡು ಬರುತ್ತದೆ. ಇತರೆ ಲಘು ಪೋಷಣಾಂಶಗಳಾದ ಮ್ಯಾಂಗನೀಸ್ ಕಬ್ಬಿಣ ತಾಮ್ರಗಳ ಕೊರತೆಯೂ ಅನೇಕ ಪ್ರದೇಶಗಳಲ್ಲಿ ಕಂಡು ಬಂದಿದೆ. ಇವುಗಳ ಕೊರತೆಯಿಂದ ಮಾವಿನ ಗುಣಮಟ್ಟ ಕುಸಿಯುತ್ತಿದೆ. ಹೀಗಾಗಿ ‘ಮಾವು ಸ್ಪೆಷಲ್’ ಎಂಬ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವನ್ನು ಮಾವು ಬೆಳೆಯುವ ವಿವಿಧ ಪ್ರದೇಶಗಳ ಮಣ್ಣು ಹಾಗೂ ಮಾವಿನ ಎಲೆಗಳನ್ನು ವಿಶ್ಲೇಷಣೆ ಮಾಡಿ ಮಣ್ಣಿಗೆ ಬೇಕಾಗುವ ಮುಖ್ಯ ಪೋಷಕಾಂಶಗಳಾದ ಸಾರಜನಕ ರಂಜಕ ಹಾಗೂ ಪೊಟ್ಯಾಷ್‌ಗಳ ಮಿಶ್ರಣ ದ್ರಾವಣವನ್ನು ಮಾವಿನ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಮರದ ಸುಪ್ತ ಹಸಿವನ್ನು ನೀಗಿಸಿ ಗುಣಮಟ್ಟದ ಫಸಲು ಹಾಗೂ ಅಧಿಕ ಇಳುವರಿಯನ್ನು ಪಡೆಯಬಹುದು ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ವೈಜಯಂತಾ ಕದಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT