ಉರುಸ್ ಝೇಲಾ ಮೆರವಣಿಗೆ ಸಡಗರ

ಬಸವಕಲ್ಯಾಣ: ನಗರದ ರಾಜಾ ಬಾಗ ಸವಾರ್ ದರ್ಗಾದ 644ನೇ ಉರುಸ್ ಪ್ರಯುಕ್ತ ಮಂಗಳವಾರ ರಾತ್ರಿ ಝೇಲಾ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಕೋಟೆಯಿಂದ ಮುಖ್ಯರಸ್ತೆಯ ಮೂಲಕ ದರ್ಗಾವರೆಗೆ ನಡೆದ ಮೆರವಣಿಗೆಯಲ್ಲಿ ವಾಹನಗಳಿಗೆ ಝೀಲಾ ಹಾಗೂ ಧ್ವಜಗಳನ್ನು ಕಟ್ಟಲಾಗಿತ್ತು. ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಸಂಭ್ರಮಿಸಿದರು.
ಶಾಸಕ ಶರಣು ಸಲಗರ ಮಾತನಾಡಿ, ‘ರಾಜಾ ಬಾಗ ಸವಾರ್ ದರ್ಗಾ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಎಲ್ಲರೂ ಐಕ್ಯತೆಯಿಂದ ಬಾಳಬೇಕು. ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ಒಂದು ವರ್ಷದ ಅವಧಿಯಲ್ಲಿ ಮಾದರಿ ನಗರವನ್ನಾಗಿಸಲಾಗುವುದು’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಎಲ್ಲರಿಗೂ ಉರೂಸ್ ಶುಭಾಶಯ ಕೋರಿದರು. ದರ್ಗಾ ಮುಖ್ಯಸ್ಥ ಜಿಯಾಪಾಶಾ ಜಾಗೀರದಾರ್, ಝೇಲಾ ಸಮಿತಿ ಅಧ್ಯಕ್ಷ ಆಸೀಫ್ ಹಾಜಿ, ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ, ಅಜರಅಲಿ ನವರಂಗ, ಮನೋಹರ ಮೈಸೆ, ರೈಸೊದ್ದೀನ್, ಅಮೀರ್ ಶೇಠ್, ಹೂಜೂರಪಾಶಾ, ಡಿ.ಕೆ.ದಾವೂದ್, ಸೈಯದ್ ಮುಸ್ತಫಾ, ಮೈನೊದ್ದೀನ್, ಆನಂದ ಹೊನ್ನಾನಾಯಕ, ಸಾಕೀಬ್ ಇದ್ದರು. ಸಂದಲ್ ಹಾಗೂ ಚಿರಾಗ್, ಕವ್ವಾಲಿ ಕಾರ್ಯಕ್ರಮವೂ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.