ಆತ್ಮಬಲ ಹೆಚ್ಚಿಸಿದ ಪ್ರಜಾವಾಣಿ ಪತ್ರಿಕೆ: ಸಚಿವ ಚವಾಣ್

ಔರಾದ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರ ಜನ್ಮದಿನದ ಅಂಗವಾಗಿ ‘ಪ್ರಜಾವಾಣಿ’ ಹೊರ ತಂದ ವಿಶೇಷ ಜಾಹೀರಾತು ಪುಟವನ್ನು ಬೋಂತಿ ತಾಂಡಾದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಪತ್ರಿಕೆಯ ವಿಶೇಷ ಪುಟ ನೋಡಿ ಸಂತಸ ವ್ಯಕ್ತಪಡಿಸಿದ ಸಚಿವ ಚವಾಣ್, ‘ಕೋವಿಡ್ ಸಂಕಷ್ಟ ನಿಭಾಯಿಸಿರುವ ರೀತಿ, ಸಂತ್ರಸ್ತರಿಗೆ ನೀಡಿದ ಸಹಾಯ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿದ ಮಹತ್ವದ ಕಾರ್ಯವನ್ನು ‘ಪ್ರಜಾವಾಣಿ’ ಯಥಾವತ್ತಾಗಿ ಪ್ರಕಟಿಸಿರುವುದು ನನ್ನ ಆತ್ಮಬಲ ಹೆಚ್ಚಿಸಿದೆ’ ಎಂದು ಹೇಳಿದರು.
ಮುಖಂಡ ಜಗದೀಶ್ ಖೂಬಾ, ‘ಸಚಿವರು ಗೋ ಪೂಜೆ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಂಡು ಮಾದರಿಯಾಗಿದ್ದಾರೆ’ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ‘ಪತ್ರಿಕೆಗಳ ಬರವಣಿಗೆಯಿಂದ ನಮಗೂ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವಾಣ್, ತಾಲ್ಲೂಕು ಪಂಚಾಯಿತಿ ಸದಸ್ಯ ಸಚಿನ್ ರಾಠೋಡ, ಪತ್ರಕರ್ತ ಮನ್ಮಥಪ್ಪ ಸ್ವಾಮಿ, ಶಿವಕುಮಾರ ವಡ್ಡೆ, ಮಹಮ್ಮದ್ ನಯೀಮ್, ನಾಗೇಶ ಪತ್ರೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.