ಗುರುವಾರ , ಫೆಬ್ರವರಿ 25, 2021
23 °C
ಪ್ರವಚನ ಕಾರ್ಯಕ್ರಮದಲ್ಲಿ ಹಾರಕೂಡದ ಡಾ. ಚೆನ್ನವೀರ ಶಿವಚಾರ್ಯ ಅಭಿಮತ

ಸಿದ್ಧಾರೂಢರ ಸಂದೇಶ ಪಸರಿಸಿದ ಶಿವಕುಮಾರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಸಿದ್ಧಾರೂಢರ ಜೀವನ ಸಂದೇಶವನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ ಶಿವಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ’ ಎಂದು ಹಾರಕೂಡದ ಡಾ. ಚೆನ್ನವೀರ ಶಿವಚಾರ್ಯ ಹೇಳಿದರು.

ನಗರದ ಸಿದ್ಧಾರೂಢ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಅಮೃತ ಮಹೋತ್ಸವದ ಎರಡನೇ ದಿನವಾದ ಸೋಮವಾರ ನಡೆದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಶಿವಕುಮಾರ ಸ್ವಾಮೀಜಿ ಅವರು ಅಧ್ಯಯನ, ಅಧ್ಯಾಪನದಲ್ಲಿ ಜೀವನ ಕಳೆದು ಭಕ್ತರ ಹೃದಯದ ಕತ್ತಲೆಯನ್ನು ಹೋಗಲಾಡಿಸಿದ್ದಾರೆ. ಸಾಮಾಜಿಕ, ಧಾರ್ಮಿಕ ಕೆಲಸಗಳನ್ನು ಮಾಡಿ ಜನ ಮಾನಸದಲ್ಲಿ ಉಳಿದಿದ್ದಾರೆ’ ಎಂದು ಬಣ್ಣಿಸಿದರು.

ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ ಮಾತನಾಡಿ, ‘ಬೀದರ್ ಜಿಲ್ಲೆಯ ಚಳಕಾಪುರವನ್ನು
ಸುಕ್ಷೇತ್ರವನ್ನಾಗಿ ಮಾಡಿದ ಶ್ರೇಯಸ್ಸು ಶಿವಕುಮಾರ ಸ್ವಾಮೀಜಿಗೆ ಸಲ್ಲುತ್ತದೆ. ಅಂದಿನ ಗುಂಪಾ ಇಂದು ಅಧ್ಯಾತ್ಮದ ಅರಮನೆಯಾಗಿದೆ’ ಎಂದು ಹೇಳಿದರು.

ಅಕ್ಕಲಕೋಟ ಶರಣಮಠದ ಚಿಕ್ಕರೇವಣಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಪರಿಶುದ್ಧ ಭಾವವಿದ್ದಲ್ಲಿ ಪರಮಾತ್ಮನಿದ್ದಾನೆ. ಅಹಂ ಕಳೆದಾಗಲೇ ಜೀವನ ಮುಕ್ತಿ. ಸಿದ್ಧಾರೂಢ ಮಠದಲ್ಲಿ ಜ್ಞಾನದ ಕುಂಭಮೇಳವೇ ಆಯೋಜನೆಗೊಂಡಿದೆ. ಇದರಲ್ಲಿ ಪಾಲ್ಗೊಂಡವರೆಲ್ಲ ಧನ್ಯರು’ ಎಂದರು.

ಮುಚಳಂಬದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ಅಜ್ಞಾನದ ಕತ್ತಲೆ ಆವರಿಸಿದ ಕಡೆ ದೇವರನ್ನು ಕಾಣಲು ಸಾಧ್ಯವಿಲ್ಲ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶಿವಕುಮಾರ ಸ್ವಾಮೀಜಿ, ‘ಉಪಕಾರ ಪಡೆದ ಬಳಿಕ ಪ್ರತ್ಯುಪಕಾರ ಮಾಡಬೇಕು. ಇದು ಭಾರತೀಯ ಸಂಸ್ಕೃತಿ. ಅನಂತ ಉಪಕಾರ ಕರುಣಿಸಿದ ಪರಮಾತ್ಮನನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು’ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಇಂಚಲದ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.

ಕಲಬುರ್ಗಿಯ ಲಕ್ಷ್ಮಿ ದೇವಿ, ನಿರುಪಾದೇಶ್ವರ ಸ್ವಾಮೀಜಿ, ಮರೆಗುದ್ದಿ, ಸ್ವರೂಪಾನಂದ ಸ್ವಾಮೀಜಿ, ನಿಜಗುಣ ದೇವರು ಹುಣಶ್ಯಾಳ, ಗಣೇಶಾನಂದ, ಪರಮಾನಂದ ಸ್ವಾಮೀಜಿ, ಶ್ರದ್ಧಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಅಭಿನವ ಘನಲಿಂಗ ರುದ್ರಮುನಿ ಶಿವಚಾರ್ಯ, ಶೋಭಾತಾಯಿ ನಾಗಪುರ, ಮನಿಷಾತಾಯಿ, ಮಾತೆ ಸಂಗೀತಾದೇವಿ, ಶಂಕರಾನಂದ ಸ್ವಾಮೀಜಿ, ಲಕ್ಷ್ಮಣಾನಂದ ಸ್ವಾಮೀಜಿ, ರಾಜಮಲ್ಲಯ್ಯ ಸ್ವಾಮೀಜಿ, ದಯಾನಂದ ಸ್ವಾಮೀಜಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.