ಶನಿವಾರ, ನವೆಂಬರ್ 23, 2019
17 °C

ಗ್ಯಾರೇಜ್‌ಗೆ ಬೆಂಕಿ: ಅಪಾರ ಹಾನಿ

Published:
Updated:
Prajavani

ಬೀದರ್: ಇಲ್ಲಿಯ ಮೈಲೂರು ರಸ್ತೆಯಲ್ಲಿರುವ ಅರುಣಸ್ವಾಮಿ ಸರ್ವಿಸಿಂಗ್‌ ಸೆಂಟರ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮೂರು ಬೈಕ್‌ ಹಾಗೂ ಗ್ಯಾರೇಜ್‌ನಲ್ಲಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಅಂಗಡಿ ಹೊತ್ತಿ ಉರಿಯುತ್ತಿದ್ದಂತೆ ಅಕ್ಕಪಕ್ಕದವರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದರು.

ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಷ್ಟರಲ್ಲಿ ಮೂರು ದ್ವಿಚಕ್ರ ವಾಹನಗಳು ಸುಟ್ಟಿದ್ದವು. ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದಾಗಿಯೇ ಬೆಂಕಿ ಹೊತ್ತಿಕೊಂಡು ದ್ವಿಚಕ್ರ ವಾಹನಗಳು ಸೇರಿ ₹4 ಲಕ್ಷ ಮೌಲ್ಯದ ಸಾಮಗ್ರಿಗಳ ಹಾನಿಯಾಗಿವೆ ಎಂದು ಅಂಗಡಿ ಮಾಲೀಕ ಗಾಂಧಿ ಗಂಜ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)