ಮಂಗಳವಾರ, ಸೆಪ್ಟೆಂಬರ್ 28, 2021
22 °C

9 ರಿಂದ ಶ್ರಾವಣಮಾಸದ ಪ್ರವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ಶ್ರಾವಣ ಮಾಸದ ಪ್ರಯುಕ್ತ ಆ. 9 ರಿಂದ ಸೆ. 6 ರವರೆಗೆ ಪಟ್ಟಣದಲ್ಲಿ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಪ್ರವಚನ ನಡೆಸಿ ಕೊಡಲಿದ್ದಾರೆ’ ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಶ್ರೀಮಠದಲ್ಲಿ ಶ್ರೀಗಳು ಆನ್‍ಲೈನ್ ಮೂಲಕ ಕನ್ನಡ, ಮರಾಠಿ ಮತ್ತು ತೆಲುಗು ಭಾಷೆಯಲ್ಲಿ ಪ್ರವಚನ ನಡೆಸಿಕೊಟ್ಟು ಭಕ್ತರಿಗೆ ಜ್ಞಾನಧಾರೆ ಎರೆದಿದ್ದರು. ಆದರೆ ಈ ಬಾರಿ ಭಕ್ತರ ಒತ್ತಾಸೆ ಮೇರೆಗೆ ಶ್ರೀಗಳು ಎಲ್ಲರ ಸಮ್ಮುಖದಲ್ಲಿ ಪ್ರವಚನ ನಡೆಸಿ ಕೊಡಲು ನಿರ್ಧರಿಸಿದ್ದಾರೆ. ವಚನ ದರ್ಶನ ವಿಷಯದ ಮೇಲೆ ಶ್ರೀಗಳು ಚನ್ನಬಸವಾಶ್ರಮದಲ್ಲಿ ಪ್ರತಿದಿನ ಸಂಜೆ 5.30 ರಿಂದ 6.30ರ ವರೆಗೆ ಪ್ರವಚನ ನೀಡಲಿ
ದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಭಕ್ತರು ಮಾಸ್ಕ್, ಸ್ಯಾನಿಟೈಸರ್ ಜತೆಗೆ ಪರಸ್ಪರ ಅಂತರ ಕಾಯ್ದುಕೊಂಡು ಪ್ರತಿ ದಿನ ಶ್ರೀಗಳ ಪ್ರವ
ಚನ ಆಲಿಸಬೇಕು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರವಚನದ ಲಾಭ ಪಡೆದುಕೊಳ್ಳಬೇಕು ಎಂದರು.

ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತ ಪ್ರತಿದಿನ ಶ್ರೀಮಠದಲ್ಲಿ ಬೆಳಿಗ್ಗೆ ಅನ್ನ ದಾಸೋಹ, ಸಾಮೂಹಿಕ ಪ್ರಾರ್ಥನೆ, ಭಜನೆ ಹಾಗೂ ಸಂಗೀತ ಸೇರಿದಂತೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.