ಎಬಿವಿಪಿ ಕಾರ್ಯಕರ್ತರಿಂದಮೌನಭೋಜನ ಕಾರ್ಯಕ್ರಮ

7

ಎಬಿವಿಪಿ ಕಾರ್ಯಕರ್ತರಿಂದಮೌನಭೋಜನ ಕಾರ್ಯಕ್ರಮ

Published:
Updated:
Deccan Herald

ಬೀದರ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶನಿವಾರ ಪ್ರತಾಪನಗರದ ಬೆಲ್ದಾಳೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮೌನಭೋಜನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಭೋಜನ ಕೋಣೆಯಲ್ಲಿ ಸರತಿ ಸಾಲಿನಲ್ಲಿ ರಂಗೋಲಿ ಹಾಕಿ ಮೇಣದ ಬತ್ತಿ ಬೆಳಗಿಸಲಾಯಿತು. ನಂತರ ವಿದ್ಯುತ್ ಆರಿಸಿ ಕಾರ್ಯಕರ್ತರು ದೀಪದ ಬೆಳಕಿನಲ್ಲಿ ಸಾಮೂಹಿಕ ಭೋಜನ ಮಾಡಿದರು.

ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್, ಬಿಜೆಪಿ ಕಬ್ಬು ಬೆಳೆಗಾರರ ರಾಜ್ಯ ಸಂಚಾಲಕ ಡಿ.ಕೆ ಸಿದ್ರಾಮ, ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ನವೀನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕಾಮಶೆಟ್ಟಿ ಚಿಕಬಸೆ, ಬಿಜೆಪಿ ರಾಜ್ಯ ಕಾರ್ಯಕಾರಣಿ ಪ್ರಮುಖ ಅಶೋಕ ಹೊಕ್ರಾಣೆ, ಪಕ್ಷದ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥ ರಾಜಗೀರಾ, ಎ.ಬಿ.ವಿ.ಪಿ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ದ ಜಾಡರ, ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳ 300 ಪ್ರತಿನಿಧಿಗಳು ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !