ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಶಂಭುಲಿಂಗೇಶ್ವರನಿಗೆ ವಿಶೇಷ ಪೂಜೆ

Last Updated 2 ಸೆಪ್ಟೆಂಬರ್ 2020, 15:18 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ರೇಕುಳಗಿ ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.

ಜಿಲ್ಲೆ ಹಾಗೂ ನೆರೆ ರಾಜ್ಯಗಳ ಭಕ್ತರು ಶ್ರದ್ಧಾ ಭಕ್ತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಪ್ರತಿ ವರ್ಷ ಅನಂತನ ಹುಣ್ಣಿಮೆ ಅಥವಾ ಜೋಕುಮಾರ ಹುಣ್ಣಿಮೆ ಸಂದರ್ಭದಲ್ಲಿ ಶಂಭುಲಿಂಗೇಶ್ವರ ರಥೋತ್ಸವ, ಜಾತ್ರೆ ನಡೆಯುವ ಸಂಪ್ರದಾಯ ಇದೆ. ಈ ವರ್ಷ ಕೋವಿಡ್19 ಕಾರಣ ಜಾತ್ರೆಗೆ ಅವಕಾಶ ಇರಲಿಲ್ಲ.

ಹುಣ್ಣಿಮೆ ಮುನ್ನಾದಿನ ಪಾದಯಾತ್ರೆ ಕೈಗೊಳ್ಳುವ ಸಂಪ್ರದಾಯದ ನಿಮಿತ್ತ ಬಹುತೇಕ ಭಕ್ತರು ಪಾದಯಾತ್ರೆಯಲ್ಲಿ ಬಂದು ಶಂಭುಲಿಂಗೇಶ್ವರ ಹಾಗೂ ಬಸಮ್ಮ ತಾಯಿ ಅವರ ಗದ್ದುಗೆಯ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಎನ್.ಬಿ. ರೆಡ್ಡಿ ಗುರೂಜಿ, ಡಿವೈಎಸ್‍ಪಿ ಬಸವೇಶ್ವರ ಹೀರಾ, ಚಿಟಗುಪ್ಪ ಸಿಪಿಐ ಶರಣಬಸಪ್ಪ ಭಜಂತ್ರಿ, ಶಿವಕುಮಾರ ಸ್ವಾಮಿ, ಶ್ರೀಕಾಂತ ಪಾಟೀಲ, ಮಾರುತಿರಾವ್ ತಾಂದಳೆ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT