ಸೋಮವಾರ, ನವೆಂಬರ್ 18, 2019
23 °C

‘ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ’

Published:
Updated:
Prajavani

ಹುಮನಾಬಾದ್: ಯುವ ಜನಾಂಗ ಉನ್ನತ ಶಿಕ್ಷಣ ಕಲಿಯುವದರ ಜತೆಗೆ ಕ್ರೀಡೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಹೇಳಿದರು.

ಪಟ್ಟಣದ ಶಕುಂತಲಾ ಪಾಟೀಲ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಅಥ್ಲೆಟಿಕ್ ಅಸೋಸಿಯೇಷನ್‍ನಿಂದ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಅಥ್ಲೆಟಿಕ್ಸ್‌ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತವರು ಕುಗ್ಗದೆ ಗೆಲುವಿಗೆ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಅಸೋಸಿಯೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಒತ್ತಡದ ಜೀವನದಲ್ಲಿ ಮನುಷ್ಯನ ಮಾನಸಿಕ, ದೈಹಿಕ ಸಾಮರ್ಥ್ಯ ವೃದ್ಧಿಗೆ ಕ್ರೀಡೆ ಹೆಚ್ಚಿನ ಚೈತನ್ಯ ನೀಡುತ್ತದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಸೋಮನಾಥ ಪಾಟಲ್ ಮಾತನಾಡಿ, ಕ್ರೀಡಾಪಟುಗಳುಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಶಿವರಾಜ ಕಣಜಿ ಮಾತನಾಡಿದರು.

ನಿವೃತ ಶಿಕ್ಷಕ ವೈಜನಾಥ ರೋಟೆ, ಗುಂಡಪ್ಪ ಸಜ್ಜನಶೆಟ್ಟಿ, ಬಿಜೆಪಿ ಮುಖಂಡ ಬಸವರಾಜ ಆರ್ಯ, ಅಥ್ಲೆಟಿಕ್ ಅಸೋಸಿಯೇಷನ್ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಸೀರಮುಂಡಿ, ಉಪಾಧ್ಯಕ್ಷ ಜಯಪಾಲರಡ್ಡಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಹೌಶೆಟ್ಟಿ, ಚಾಮರಾಜ ಸೀರಮುಂಡಿ, ಶಕುಂತಲಾ ಪಾಟೀಲ್ ವಸತಿ ಶಾಲೆ ಪ್ರಾಚಾರ್ಯ ವೆಂಕಟೇಶ, ದಿನೇಶ ತಾಂದಳೆ, ಕಿರಣ ಕುಲ್ಕರ್ಣಿ, ರಂಗನಾಥ, ರಾಘವೆಂದ್ರ, ವೀರಣ್ಣಾ, ಜೈವಂತರಡ್ಡಿ, ವಿರೇಂದ್ರ ಮೂರಡಾ, ಗಣಪತಿ ಪವಾರ್, ನಿರಂಜನ್, ರಾಜಕುಮಾರ, ಸಂತೋಷ, ನಾಗಯ್ಯ ಸ್ವಾಮಿ, ಶ್ರೀಮತಿಬಾಯಿ ರಡ್ಡಿ, ಸುನೀತಾ ಪಾಟೀಲ, ವಿಮಲಾಬಾಯಿ, ಸತೀಷ ಸೂಗಿ ಇದ್ದರು.

ಪ್ರತಿಕ್ರಿಯಿಸಿ (+)