ಮಂಗಳವಾರ, ಮಾರ್ಚ್ 28, 2023
30 °C

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತೀವ್ರ ವಿರೋಧ: 5 ಕಿ.ಮೀ ಸೈಕಲ್ ತುಳಿದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ತಾಲ್ಲೂಕಿನ ಧುಮ್ಮನಸೂರ ಗ್ರಾಮದಿಂದ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮೂಲಕ ಡಾ.ಅಂಬೇಡ್ಕರ್‌ ವೃತ್ತದ ವರೆಗೆ ಶಾಸಕ ರಾಜಶೇಖರ ಪಾಟೀಲ ಕಾರ್ಯಕರ್ತರೊಂದಿಗೆ 5 ಕಿ.ಮೀ. ಸೈಕಲ್ ತುಳಿಯುವ ಮೂಲಕ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ಶಾಸಕರು, ‘ತೈಲ ಸೇರಿದಂತೆ ದಿನಸಿ ಪದಾರ್ಥಗಳ ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರ ಜೀವನಕ್ಕೆ ತೊಂದರೆ ಉಂಟಾಗಿದೆ. ಕೋವಿಡ್ ಒಂದು ಮತ್ತು ಎರಡನೇ ಅಲೆಯಿಂದ ಅನೇಕರು ತಮ್ಮ ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ ಕೊಡಲೇ ಬೆಲೆ ಏರಿಕೆ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಮೇಶ ಡಾಕುಳಗಿ, ನೂರೋದ್ದಿನ್, ಪುರಸಭೆ ಸದಸ್ಯ ಅಫ್ಸರ್‌ಮಿಯಾ, ಪಕ್ಷದ ಯುವ ಘಕಟದ ಅಧ್ಯಕ್ಷ ಉಮೇಶ ಜಂಬಗಿ, ಕೇಶಪ್ಪ ಬಿರಾದಾರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ, ಬೀದರ್‌– ಕಲಬುರ್ಗಿ ಹಾಗೂ ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ರೇವಣಸಿದ್ದಪ್ಪ ಪಾಟೀಲ, ಪುರಸಭೆ ಅಧ್ಯಕ್ಷೆ ಕಸ್ತೂರಬಾಯಿ ಪರಸನೋರ, ಹಳ್ಳಿಖೇಡ (ಬಿ) ಪುರಸಭೆ ಅಧ್ಯಕ್ಷ ಮಹಾಂತಯ್ಯ ತೀರ್ಥಾ, ರಾಜು ಇಟಗಿ, ಕಂಟೆಪ್ಪ ಧಾನಾ, ಲಕ್ಷ್ಮಣರಾವ ಬುಳ್ಳಾ, ಪ್ರಕಾಶ ಬತಲಿ, ದತ್ತಕುಮಾರ ಚಿದ್ರಿ, ಮಲ್ಲಿಕಾರ್ಜುನ ಮಾಶೆಟ್ಟಿ, ಮಲ್ಲಿಕಾರ್ಜುನ ಶರ್ಮಾ, ರಂಜಿತ ಮಾನ ಕಾರೆ, ವಾಹೇದ ಬೇಗ, ವಿಜಯ ಕುಮಾರ ನಾತೆ, ಮಲ್ಲಿಕಾರ್ಜುನ ಮಹಿಂದ್ರಕರ್, ಪ್ರಕಾಶ, ಸುರೇಶ ಘಾಂಗ್ರೆ, ಧರ್ಮರೆಡ್ಡಿ, ವೀರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು