ಬಸವಕಲ್ಯಾಣ: ’ಶಿಕ್ಷಣದಿಂದ ವ್ಯಕ್ತಿತ್ವದ ವಿಕಸನ ಆಗಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು' ಎಂದು ಮುಖ್ಯ ಶಿಕ್ಷಕಿ ಭಾರತಿ ಗೌಡರ್ ಹೇಳಿದರು.
ಪುಣ್ಯಕೋಟಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಹಾಗೂ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
’ಮಕ್ಕಳಲ್ಲಿನ ಪ್ರತಿಭೆ ಹೊರಬರಲು ಅನುಕೂಲಕರ ವಾತಾವರಣ ಕಾಲೇಜು ಮಟ್ಟದಲ್ಲಿ ಇರುತ್ತದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು‘ ಎಂದರು.
ನಾಗೇಂದ್ರ ಜೀವಣಗೆ ಮಾತನಾಡಿ, ’ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ನಿರಂತರ ಅಧ್ಯಯನದಲ್ಲಿ ತೊಡಗಬೇಕು' ಎಂದರು.
ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ಕೋಶಾಧ್ಯಕ್ಷ ಶಶಿಕಾಂತ ಶೀಲವಂತ, ಉಮಾಕಾಂತ, ಸುರೇಖಾ ಸೂರ್ಯಕಾಂತ ಮಾತನಾಡಿದರು.
ವಿದ್ಯಾರ್ಥಿಗಳಾದ ಕೀರ್ತಿ ದುರ್ಯೋಧನ, ಸುಮೀತ ವೀರಣ್ಣ ಅವರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಉಪನ್ಯಾಸಕರಾದ ನಾಮದೇವ ಲಾತೂರೆ, ಅಶೋಕ ಪೋತೆ, ಕಿಶೋರ ಕುಲಕರ್ಣಿ, ಸುರೇಶ ಮುಳೆ, ಪ್ರಫುಲಕುಮಾರ, ವಿಜಯಲಕ್ಷ್ಮಿ ಬಿರಾದಾರ, ಮಹಾದೇವಿ ದಾಸೂರೆ, ಸ್ವಪ್ನಾ ಮರಬಗೆ ಉಪಸ್ಥಿತರಿದ್ದರು. ಶರಣಮ್ಮ ಸ್ವಾಗತಿಸಿದರು. ದಾಕ್ಷಾಯಿಣಿ ನಿರೂಪಿಸಿದರು. ಪ್ರಣೀತ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.