ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ವಚನ ಅಧ್ಯಯನ ಅವಶ್ಯ: ಬಸವಲಿಂಗ ಪಟ್ಟದ್ದೇವರು

Last Updated 27 ಡಿಸೆಂಬರ್ 2019, 11:30 IST
ಅಕ್ಷರ ಗಾತ್ರ

ಭಾಲ್ಕಿ: ಬದುಕಿನಲ್ಲಿ ಪ್ರತಿಯೊಬ್ಬರು ಉತ್ತಮ ಚಾರಿತ್ರ್ಯ, ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ನಿತ್ಯ ವಚನ ಅಧ್ಯಯನ ಮಾಡಬೇಕು ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಇಲ್ಲಿಯ ಚನ್ನಬಸವಾಶ್ರಮದಲ್ಲಿ ಮೈಲಾರ ಬಸವಲಿಂಗ ಶರಣರು ವಿರಚಿತ ಗುರುಕರುಣ ತ್ರಿವಿಧಿ ಕುರಿತಾದ ಪ್ರವಚನ ಮಂಗಲ, ಭಾರತಿ ಎಂ.ಕೆಂಪಯ್ಯ ವಿರಚಿತ ಮಹದಾವರಣಗಳು ಗ್ರಂಥ ಲೋಕಾರ್ಪಣೆಗೊಳಿಸಿದರು.

ಶರಣರು ತಮ್ಮ ಜೀವನಾನುಭವಗಳನ್ನು ವಚನಗಳ ಮೂಲಕ ಸಾಮಾನ್ಯ ಜನರಿಗೆ ತಿಳಿಸಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದರು. ಶರಣರ ಬದುಕನ್ನು ಮಾದರಿಯಾಗಿಸಿಕೊಂಡು ಸಂತೃಪ್ತಿ ಕಾಣಬೇಕು ಎಂದು ಸಲಹೆ ನೀಡಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಬಸವರಾಜ ಸ್ವಾಮೀಜಿ, ಮಾತೆ ಗಾಯತ್ರಿತಾಯಿ, ಪ್ರೊ.ಶಂಭುಲಿಂಗ ಕಾಮಣ್ಣ, ಸಾಹಿತಿ ಜಯಶ್ರೀ ಸುಕಾಲೆ, ರೈತ ಮುಖಂಡ ಸಿದ್ರಾಮಪ್ಪ ಅಣದೂರೆ, ಜಯಮ್ಮ ಶೇಖರಪ್ಪ, ಪ್ರೊ.ಮಲ್ಲಮ್ಮ ಆರ್.ಪಾಟೀಲ, ಬಸವರಾಜ ಸ್ವಾಮಿ ಇದ್ದರು. ವೀರಣ್ಣ ಕುಂಬಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT