ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ವಿಭಾಗದ ನಾಲ್ವರ ಅಮಾನತು

ಬೀದರ್ ನಗರಸಭೆ ತೆರಿಗೆ ಹಣ ಕಬಳಿಕೆ:
Last Updated 14 ಆಗಸ್ಟ್ 2021, 13:04 IST
ಅಕ್ಷರ ಗಾತ್ರ

ಬೀದರ್‌: ತೆರಿಗೆ ಹಣ ದುರುಪಯೋಗ ಮಾಡಿದ ಹಾಗೂ ಬೀದರ್ ನಗರಸಭೆಗೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ನಾಲ್ವರನ್ನು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅಮಾನತುಗೊಳಿಸಿದ್ದಾರೆ.

₹ 3,85,118 ತೆರಿಗೆ ಹಣ ದುರಪಯೋಗ ಮಾಡಿದ ಬೀದರ್‌ ನಗರಸಭೆ ಕಂದಾಯ ವಿಭಾಗದ ದ್ವಿತೀಯ ದರ್ಜೆ ಸಹಾಯಕ ಬಸವರಾಜ ಬೋರೆ, ತೆರಿಗೆ ವಸೂಲಿದಾರ ಮೆಹಬೂಬಸಾಬ್, ಪ್ರಭಾರಿ ತೆರಿಗೆ ವಸೂಲಿದಾರ ನಾಸಿರ್ ಖಾನ್‌ ಹಾಗೂ ಸದ್ಯ ಔರಾದ್ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತೆರಿಗೆ ವಸೂಲಿದಾರ ಲೋಕೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಲೆಕ್ಕ ಪರಿಶೀಲನೆ ಸಂದರ್ಭದಲ್ಲಿ ನಗರಸಭೆ ಹಾಗೂ ಬ್ಯಾಂಕ್‌ ಲೆಕ್ಕದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ನಗರಸಭೆ ನಾಲ್ವರು ಸಿಬ್ಬಂದಿ ಹಣ ಕಬಳಿಸಿರುವುದು ಬೆಳಕಿಗೆ ಬಂದಿತ್ತು. ನಗರಸಭೆ ಆಯುಕ್ತರು ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರಬರೆದಿದ್ದರು. ನ್ಯೂಟೌನ್‌ ಪೊಲೀಸರ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT