ಸೋಮವಾರ, ಅಕ್ಟೋಬರ್ 26, 2020
21 °C

ಕೋಲಿ ಸಮಾಜದಿಂದ ನಾರಾಯಣರಾವ್‌ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಅವರ ಕನಸುಗಳು ನನಸಾಗಬೇಕಾದರೆ ಉಪ ಚುನಾವಣೆಯಲ್ಲಿ ಟೋಕರೆ ಕೋಲಿ ಸಮಾಜದ ಅಭ್ಯರ್ಥಿಯನ್ನೇ ಅವಿರೋಧ ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸುವ ಪ್ರಯತ್ನ ನಡೆಯಬೇಕು’ ಎಂದು ಸಮಾಜದ ಹಿರಿಯ ಮುಖಂಡ ನಾರಾಯಣರಾವ್ ಭಂಗಿ ಹೇಳಿದರು.

ಇಲ್ಲಿಯ ಲಾಡಗೇರಿಯ ಸಮುದಾಯ ಭವನದಲ್ಲಿ ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘ, ಜಿಲ್ಲಾ ಟೋಕರೆ ಕೋಲಿ ಸಮಾಜ ನೌಕರರ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆಯ ಆಶ್ರಯದಲ್ಲಿ ಭಾನುವಾರ ನಡೆದ ಬಿ.ನಾರಾಯಣರಾವ್ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಜಮಾದಾರ ಮಾತನಾಡಿ, ಹೋರಾಟದಿಂದ ಗುರುತಿಸಿಕೊಂಡು ಬಡವರ ಹಿಂದುಳಿದ ವರ್ಗಗಳ ಧ್ವನಿಯಾಗಿದ್ದ ಧೀಮಂತ ನಾಯಕ ಬಿ.ನಾರಾಯಣರಾವ್ ಅವರನ್ನು ಕಳೆದುಕೊಂಡು ಟೋಕರೆ ಕೋಲಿ ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ’ ಎಂದರು.

ಜಿಲ್ಲಾ ಟೋಕರೆ ಕೋಲಿ ಸಮಾಜ ನೌಕರರ ಸಂಘದ ಅಧ್ಯಕ್ಷರಾದ ಮಾಣಿಕ ನೇಳಗಿ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಾರ್ವತಿ ಮಾತನಾಡಿದರು.

ಮುಖಂಡರಾದ ಪಾಂಡುರಂಗ ಗುರುಜಿ, ಸುನೀಲ ಭಾವಿಕಟ್ಟಿ, ಮಹೇಶ ಪಾಲಂ, ಸುನೀಲ ಖಾಶೆಂಪೂರ, ನಂದಕುಮಾರ ಜಮಗಿಕರ್, ಝರಣಪ್ಪ ಚಾಂಗಲೇರ್, ಅಶೋಕ ಪಂಡರಗೇರಾ, ರಾಜಕುಮಾರ ಕರ್ಣೆ, ರಮೇಶ ಖಾಶೆಂಪೂರ, ಶಂಕರವಾರ್ ಜಮಾದಾರ್, ಬಸವರಾಜ ಖಾಶೆಂಪೂರ, ಸಂಜುಕುಮಾರ ಅಲಿಯಂಬರ್, ಧನರಾಜ್ ಹಂಗರಗಿ, ಸತ್ಯಪ್ರಕಾಶ ಕೋಲಿ, ಬಾಬುರಾವ್ ಕ್ಯಾಶೆ, ವಿಜಯಕುಮಾರ ಲಾಡಗೇರಿ, ಮಾರುತಿ ಭಾವಿಕಟ್ಟಿ, ಬಸವರಾಜ ಖಾಶೆಂಪೂರ, ಮಾರುತಿ ಮಾಸ್ಟರ್, ಶರಣಪ್ಪ ಭಾವಿಕಟ್ಟಿ, ತುಕಾರಾಮ ಯಾಕತನೂರ್, ಅಶೋಕ ಕಾಗೆ, ಲಕ್ಷ್ಮೀಬಾಯಿ, ವಿಜಯಕುಮಾರ ಸೋನಾರೆ, ತಿಪ್ಪಣ್ಣ ರಾಂಪೂರೆ, ಬಕ್ಕಣ್ಣ ಸಂಗಮ್, ಸುಧಾಕರ ಮಾಸ್ಟರ್, ಪ್ರತ್ವಿರಾಜ ಭಂಗಿ, ಶರಣಪ್ಪ ಭಾವಿಕಟ್ಟಿ, ಈಶ್ವರ ಜಮಾದಾರ್, ಧನರಾಜ ಚಿಂತಾಮಣಿ, ಹಣಂತ ವಿಠ್ಠಲಪೂರ್, ಲೋಕೇಶ ಕೋಲಿ, ಜಗದೀಶ್ ಕೋಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.