ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಸಂತರ ವಾಣಿಯಲ್ಲಿ ಅಡಗಿದೆ ಆಗಾಧ ಶಕ್ತಿ: ಬಸವಲಿಂಗ ಪಟ್ಟದ್ದೇವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಶರಣರ ಸಂತರ ವಾಣಿಯಲ್ಲಿ ಆಗಾಧ ಶಕ್ತಿ ಅಡಗಿದೆ. ದುರ್ಗುಣ ವ್ಯಕ್ತಿಯನ್ನು ಮಹಾ ಶರಣನನ್ನಾಗಿ ಮಾಡುವ ಶಕ್ತಿ ವಚನಗಳಿಗೆ ಇದೆ’ ಎಂದು ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ನುಡಿದರು.

ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಆಯೋಜಿಸಿದ್ದ 132ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ಶ್ರೀ ಸಂಗಮೇಶ್ವರ ಸ್ವಾಮೀಜಿ ಪ್ರವಚನ ಆಧಾರಿತ ಪ್ರೊ.ಉಮಾಕಾಂತ ಮೀಸೆ ರಚಿತ ‘ಸದ್ಭಕ್ತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸದ್ಭಕ್ತ ಕೃತಿಗಳಂತಹ ಶರಣರ ಸಂತರ ಕೃತಿಗಳನ್ನು ಅಧ್ಯಯನ ಮಾಡಿ ಅಂತರಂಗದ ಮಹಾ ಬೆಳಕಿನಲ್ಲಿ ಜೀವನದ ರಥವನ್ನು ಸಾಗಿಸಿಕೊಂಡು ಹೋಗಬೇಕು’ ಎಂದರು.

ಯುವ ನಾಯಕ ಅರುಣಕುಮಾರ ಹೋತಪೇಟೆ ಕಾರ್ಯಕ್ರಮ ಉದ್ಘಾಟಿಸಿದರು. ವಿಮರ್ಶಕ ರಾಮಚಂದ್ರ ಗಣಾಪೂರ ಹಾಗೂ ಕೃತಿ ಸಂಪಾದಕ ಪ್ರೊ.ಉಮಾಕಾಂತ ಮೀಸೆ ಮಾತನಾಡಿದರು.

ಪ್ರೊ. ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಬಸವಲಿಂಗ ಪಟ್ಟದ್ದೇವರನ್ನು ವಿಶ್ವ ಕನ್ನಡಿಗರ ಸಂಸ್ಥೆಯ ಕರ್ನಾಟಕದ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಸನ್ಮಾನಿಸಿದರು.

ಮಹಾಲಿಂಗ ಸ್ವಾಮೀಜಿ, ಸಾಹಿತಿ ಎಂ.ಜಿ. ದೇಶಪಾಂಡೆ, ಚಂದ್ರಶೇಖರ ಹೆಬ್ಬಾಳೆ, ಜೈರಾಜ ಖಂಡ್ರೆ, ಗುಂಡಪ್ಪ ಹುಡಗೆ, ಶ್ರೀಕಾಂತ ಬಿರಾದಾರ, ರಾಜಕುಮಾರ ಶಂಭು, ಭಿಮಾಶಂಕರ ಬಿರಾದಾರ, ಶಕುಂತಲಾ ಮೀಸೆ, ಪ್ರದೀಪಕುಮಾರ ಮೀಸೆ, ಸಂಗ್ರಮಪ್ಪ ಬಿರಾದಾರ, ಸಿದ್ದಪ್ಪ ಕೋರೆ ಮತ್ತು ಮಲ್ಲಿಕಾರ್ಜುನ ಹುಡಗೆ, ಯೋಗೇಂದ್ರ ಯದಲಾಪೂರೆ, ಗುರುನಾಥ ಬಿರಾದಾರ ಹಾಗೂ ಶರಣ ಶರಣಿಯರು ಇದ್ದರು.

ವಚನಶ್ರೀ ಚನ್ನಬಸಪ್ಪ ನೌಬಾದೆ ವಚನಗಾಯನ ನಡೆಸಿಕೊಟ್ಟರು. ಶ್ರೀಕಾಂತ ಬಿರಾದಾರ ಸ್ವಾಗತಿಸಿದರು. ಲಕ್ಷ್ಮಿ ಗುರುನಾಥ ಬಿರಾದಾರ ನಿರೂಪಿಸಿದರು. ಸಿ.ಎನ್. ರಘುನಾಥ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು