ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೇಳವರ ಕುಟುಂಬಕ್ಕೆ ಬೇಕಿದೆ ಸಹಾಯ ಹಸ್ತ

ಗಣಪತಿ ಡಿ.
Published 5 ಏಪ್ರಿಲ್ 2024, 6:09 IST
Last Updated 5 ಏಪ್ರಿಲ್ 2024, 6:09 IST
ಅಕ್ಷರ ಗಾತ್ರ

ಕಮಲನಗರ: ಇವರದು ರಸ್ತೆ, ಮನೆ, ವಿವಿಧ ಸ್ವಚ್ಚ ಮಾಡಲು ಬಳಕೆ ಮಾಡುವ ಬಾರಿಗೆ ತಯಾರಿಸುವ ಕಾಯಕ. ಸಿಂದಿ ಬಾರಿಗೆ, ಚಾಪೆ, ಬುಟ್ಟಿ ಇತರೆ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.

ಪಟ್ಟಣದ ಹಿಮ್ಮತ ನಗರ ಬಡಾವಣೆಯ ಬೀದರ್‌ ನಾಂದೇಡ ಹೆದ್ದಾರಿ 50ರ ಮಧ್ಯದಲ್ಲಿರುವ ರೈಲ್ವೆ ಸೇತುವೆ ಪಕ್ಕದಲ್ಲಿ ಐದಾರು ಕುಟುಂಬಗಳು ವಾಸವಾಗಿವೆ.

ಕಳೆದ ಹಲವಾರು ವರ್ಷಗಳಿಂದ ಟಿನ್‌ಶೆಡ್‌ನಲ್ಲಿ ವಾಸವಾಗಿದ್ದಾರೆ. ಇವರಿಗೆ ಮೂಲ ಸೌಕರ್ಯಗಳಿಲ್ಲ. ಕಳೆದ 5 ವರ್ಷಗಳ ಹಿಂದೆ ಅತಿವೃಷ್ಠಿಯಿಂದ ಮನೆಗಳಲ್ಲಿ ನೀರು ತುಂಬಿದಾಗ ಆಗಿನ ಜಿಲ್ಲಾಧಿಕಾರಿ ಸರ್ಕಾರದಿಂದ ಮನೆಮಾಡಿಸಿ ಕೊಡುವ ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ನಮಗೆ ಮನೆ ಸಿಕ್ಕಿಲ್ಲ. ರಾತ್ರಿಯಲ್ಲ ವಾಹನಗಳ ಮತ್ತು ರೈಲುಗಳ ಶಬ್ದವೂ ಬಹಳ ಬರುತ್ತದೆ. ಹೀಗಾಗಿ ನಿವಾಸಕ್ಕಾಗಿ ಸರ್ಕಾರ ಇವರಿಗೆ ಸಹಾಯ ಮಾಡಬೇಕು ಎನ್ನುತ್ತಾರೆ ಶೇಷರಾವ ಎರಸ್ಸನ್.

‘ಈಚಲು ಮರದ ಎಲೆಗಳು ಸರಿಯಾಗಿ ಸಿಗುತ್ತಿಲ್ಲ. ಆದ್ದರಿಂದ ಪಕ್ಕದ ರಾಜ್ಯ ತೆಲಂಗಾಣದಿಂದ ತರುತ್ತಿದ್ದೇವೆ. ದುಬಾರಿ ಬೆಲೆ ನೀಡಿ ತರಬೇಕಾಗಿದೆ. ನಾವು ಮಾಡಿದ ಪೊರಕೆಗಳು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆಗಳಿಲ್ಲ. ಆದರಿಂದ ನಾವು ವಾರದ ಸಂತೆಗಳಿಗೆ ಹೋಗಿ ಮಾರಾಟ ಮಾಡಿ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಾಂತಾಬಾಯಿ ಶೇಷರಾವ ಎರಸ್ಸನ್.

ಪ್ರಸ್ತುತ ದಿನಗಳಲ್ಲಿ ಪ್ಲ್ಯಾಸ್ಟಿಕ್ ವಸ್ತುಗಳು ಬಂದಿರುವುದರಿಂದ ನಮ್ಮ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಈಚಲು ಮರದ ಪೊರಕೆ, ಚಾಪೆ, ಮರಾ, ಬುಟ್ಟಿಯನ್ನು ತಯಾರಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT