ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳೊಂದಿಗೆ ಕೊಕ್ಕೊ, ಕಬಡ್ಡಿ ಆಡಿದ ಕೇಂದ್ರ ಸಚಿವ ಭಗವಂತ ಖೂಬಾ

ಜಿಲ್ಲೆಯ 26 ಶೈಕ್ಷಣಿಕ ವಲಯಗಳಲ್ಲಿ ಸಂಸದರ ಕ್ರೀಡಾ ಮಹಾ ಮೇಳ
Last Updated 28 ಜನವರಿ 2023, 15:53 IST
ಅಕ್ಷರ ಗಾತ್ರ

ಜನವಾಡ: ಜಿಲ್ಲೆಯಲ್ಲಿ ಶನಿವಾರ ಸಂಸದರ ಕ್ರೀಡಾ ಮಹಾ ಮೇಳದ ಸಂಭ್ರಮ ಕಂಡು ಬಂದಿತು. ಮೇಳದ ಅಂಗವಾಗಿ ಜಿಲ್ಲೆಯ 26 ಶೈಕ್ಷಣಿಕ ವಲಯಗಳಲ್ಲಿ ಏಕಕಾಲಕ್ಕೆ ವಲಯ ಮಟ್ಟದ ವಾಲಿಬಾಲ್, ಕಬಡ್ಡಿ, ಕೊಕ್ಕೋ, 100 ಮೀ. ಓಟ, 200 ಮೀ. ಓಟ, 400 ಮೀ. ಓಟದ ಸ್ಪರ್ಧೆಗಳು ನಡೆದವು.

ವಲಯ ಮಟ್ಟದ ಸ್ಪರ್ಧೆಗಳಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 17 ವರ್ಷದ ಒಳಗಿನ 12 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡು ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬೀದರ್ ತಾಲ್ಲೂಕಿನ ಮನ್ನಳ್ಳಿಯಲ್ಲಿ ಸಂಸದರ ಕ್ರೀಡಾ ಮಹಾ ಮೇಳಕ್ಕೆ ಚಾಲನೆ ನೀಡಿದರು. ಬುಧೇರಾ ಶಾಲೆಗೆ ಭೇಟಿ ಕೊಟ್ಟ ಅವರು ಕ್ರೀಡಾ ಮಹಾ ಮೇಳದಲ್ಲಿ ಮಕ್ಕಳೊಂದಿಗೆ ಕೊಕ್ಕೋ ಹಾಗೂ ಮನ್ನಾಎಖ್ಖೆಳ್ಳಿಯಲ್ಲಿ ಕಬಡ್ಡಿ ಆಡಿ ಹುರಿದುಂಬಿಸಿದರು. ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದರು.
ದೈಹಿಕ ಸಾಮಥ್ರ್ಯ ವೃದ್ಧಿ: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳ ದೈಹಿಕ ಸಾಮಥ್ರ್ಯ ವೃದ್ಧಿಸುತ್ತದೆ ಎಂದು ಮನ್ನಳ್ಳಿಯಲ್ಲಿ ಸಂಸದರ ಕ್ರೀಡಾ ಮಹಾ ಮೇಳಕ್ಕೆ ಚಾಲನೆ ನೀಡಿದ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಮಕ್ಕಳು ಕ್ರೀಡೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಕ್ರೀಡಾ ಪ್ರೇಮ ಮೆರೆಯಬೇಕು ಎಂದು ನುಡಿದರು.
ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ, ಡಿಡಿಪಿಐ ಸಲೀಂ ಪಾಶಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT