ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜೋಡೋ ಯಾತ್ರೆಗೆ ಸಾವಿರ ಕಾರ್ಯಕರ್ತರು

ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಸಭೆಯಲ್ಲಿ ನಿರ್ಧಾರ
Last Updated 30 ಸೆಪ್ಟೆಂಬರ್ 2022, 14:31 IST
ಅಕ್ಷರ ಗಾತ್ರ

ಬೀದರ್: ಭಾರತ ಜೋಡೋ ಯಾತ್ರೆ ತಲುಪಲಿರುವ ರಾಯಚೂರಿಗೆ ಜಿಲ್ಲೆಯಿಂದ ಒಂದು ಸಾವಿರ ಕಾರ್ಯಕರ್ತರನ್ನು ಕರೆದೊಯ್ಯಲು ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕ ನಿರ್ಧರಿಸಿದೆ.

ನಗರದ ಶಿವನಗರದಲ್ಲಿ ಇರುವ ಪಕ್ಷದ ಜಿಲ್ಲಾ ಘಟಕದ ಕಚೇರಿಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಡಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ವಿಭಾಗದ ಯಾತ್ರೆ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಯಾತ್ರೆ ಅಕ್ಟೋಬರ್ 21 ಇಲ್ಲವೇ 22 ರಂದು ರಾಯಚೂರಿಗೆ ಬರಲಿದೆ. ಪರಿಶಿಷ್ಟ ಜಾತಿ ವಿಭಾಗದಿಂದ ಒಂದು ಸಾವಿರ ಕಾರ್ಯಕರ್ತರನ್ನು ಕರೆದುಕೊಂಡು ಹೋಗುವ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಸಿದ್ಧತೆಯೂ ನಡೆದಿದೆ ಎಂದು ಡಿ.ಕೆ. ಸಂಜುಕುಮಾರ ತಿಳಿಸಿದರು.

ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಸಂಕಷ್ಟಗಳನ್ನು ಮುಂದಿಟ್ಟುಕೊಂಡು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ ಜೋಡೋ ಯಾತ್ರೆ ಐತಿಹಾಸಿಕವಾಗಿದೆ ಎಂದು ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಸ್ತುವಾರಿ ಕನಿರಾಮ ರಾಠೋಡ್ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ್ ಯಾತ್ರೆಯ ಉದ್ದೇಶ ವಿವರಿಸಿದರು. ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ ಹಾಗೂ ಮೋಹನ್ ಕಾಳೆಕರ್ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ವಿನೋದ ಅಪ್ಪೆ, ಬಸವರಾಜ ಕಾಂಬಳೆ, ದೇವೇಂದ್ರ ಪೋಲಾ, ಸಂಜು ಲಂಜವಾಡ್, ಅಭಿಷೇಕ ಜನವಾಡ, ಮಲ್ಲಿಕಾರ್ಜುನ ಮೊಳಕೇರೆ, ಲಕ್ಷ್ಮಣ ಸಾತನೂರು, ಜೋಸೆಫ್ ಕೊಡ್ಡಿಕರ್, ವೆಂಕಟೇಶ ಚಿದ್ರಿ, ರವಿ ಚಿದ್ರಿ, ಅಕ್ಷವರ್ಧನ್, ರವೀಂದ್ರ ಚಲುವಾ, ರವೀಂದ್ರ, ಸೂರ್ಯಕಾಂತ ದೇಶಪಾಂಡೆ, ಮೋಹನ್ ಡಾಂಗೆ, ಲೋಕೇಶ್ ಮಂಗಲಗಿ, ಲಕ್ಷ್ಮೀಕಾಂತ ಬನ್ನೇರ್, ಸತೀಶ್, ರಾಜು ಚಿಂತಾಕಿ, ಸೂರ್ಯಕಾಂತ ಸಾಧುರೆ, ವಿಶಾಲ್ ದೊಡ್ಡಿ, ಗೌತಮ ಭೋಸ್ಲೆ, ಗುರುದಾಸ್ ಅಮದಲಪಡ್, ಜಡಸನ್ ಜನವಾಡ, ಅಭಿಷೇಕ ಕೊಳದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT