ಬೀದರ್: ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಮೂರು ದಿನಗಳ ಪುಸ್ತಕ ಸಂತೆಗೆ ಶನಿವಾರ ಚಾಲನೆ ನೀಡಲಾಯಿತು.

ರಾಜ್ಯದ ವಿವಿಧ ಭಾಗದ ಸಾಹಿತಿಗಳು, ಪ್ರಕಾಶಕರು, ಓದುಗರು ಸಾಕ್ಷಿಯಾದ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಚಾಲನೆ ನೀಡಿ, ರಾಜ್ಯದ ಗಡಿಭಾಗದಲ್ಲಿರುವ ಬೀದರ್ ಜಿಲ್ಲೆಯಲ್ಲಿ ಪುಸ್ತಕ ಸಂತೆ ಆಯೋಜಿಸಿರುವುದು ಶ್ಲಾಘನಾರ್ಹ ಕೆಲಸ. ಜನರಲ್ಲಿ ಪುಸ್ತಕ ಅಭಿರುಚಿ ಬೆಳೆಸಲು ಇದು ಸಹಕಾರಿಯಾಗಲಿದೆ. ರಾಜ್ಯ ಸರ್ಕಾರ ಬಜೆಟ್ನಲ್ಲಿ ಗ್ರಂಥಾಲಯಕ್ಕೆ ಹಣ ಮೀಸಲಿಡಬೇಕು. ಪುಸ್ತಕ ಪ್ರಕಾಶಕರಿಗೆ ಪೂರಕವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಸಗಟು ಪುಸ್ತಕಗಳ ಖರೀದಿ ಮಾಡಿಲ್ಲ. ಗ್ರಂಥಾಲಯ ಇಲಾಖೆ ಕೂಡ ಪುಸ್ತಕ ಖರೀದಿಸಿಲ್ಲ. ಇದು ಕಾಲಕಾಲಕ್ಕೆ ನಡೆಯುತ್ತಿರಬೇಕು. ಬಜೆಟ್ನಲ್ಲಿಯೇ ಇದಕ್ಕೆ ವಿಶೇಷ ಅನುದಾನ ಇರಿಸಬೇಕು. 1965ರಲ್ಲಿ ಗ್ರಂಥಾಲಯ ಅಧಿನಿಯಮ ಜಾರಿಗೆ ಬಂದಿದೆ. ಆದರೆ, ಇದರಿಂದ ಏನು ಪ್ರಯೋಜನ. ರಾಜ್ಯದಲ್ಲಿ 6,804 ಗ್ರಂಥಾಲಯಗಳಿವೆ. ಆದರೆ, ಅವುಗಳಿಗೆ ಪುಸ್ತಕ ಪೂರೈಸುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಿಸಬೇಕಿದೆ ಎಂದು ಒತ್ತಿ ಹೇಳಿದರು.

ವೀರಲೋಕ ಬುಕ್ಸ್ನ ವೀರಕಪುತ್ರ ಶ್ರೀನಿವಾಸ ಮಾತನಾಡಿ, ಪುಸ್ತಕ ಖರೀದಿಸಿ, ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಬೆಂಗಳೂರಿನಿಂದ ಹೊರಗೆ ಮೊದಲ ಬಾರಿಗೆ ಪುಸ್ತಕ ಸಂತೆ ಆಯೋಜಿಸಲಾಗಿದೆ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ವೀರಲೋಕ ಬುಕ್ಸ್ನ ವೀರಕಪುತ್ರ ಶ್ರೀನಿವಾಸ, ಸಂತೆಯ ಆಯೋಜಕ ಗುರುನಾಥ ರಾಜಗೀರಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ನಟರಾದ ಸುಚೇಂದ್ರಪ್ರಸಾದ್, ಅಶ್ವತ್ಥ, ಬಾಬುರಾವ್ ಮಲ್ಕಾಪುರೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.