ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಮಳೆಯಿಂದ ಮೂರು ಮನೆಗಳ ಗೋಡೆ ಕುಸಿತ

Last Updated 23 ಜುಲೈ 2021, 6:20 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನಲ್ಲಿ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಪಟ್ಟಣ ತಾಲ್ಲೂಕಿನ ಬನ್ನಳ್ಳಿ, ವಳಖಿಂಡಿ ಗ್ರಾಮಗಳು ಸೇರಿ ಒಟ್ಟು ಮೂರು ಮನೆಗಳ ಗೋಡೆ ಗುರುವಾರ ಮಧ್ಯರಾತ್ರಿ ಕುಸಿದಿವೆ.

ಪಟ್ಟಣದ ಅಶ್ವಿನಿ ಕಾಶಿನಾಥ ಅವರ ಮನೆಯ ಒಂದು ಬದಿಯ ಗೋಡೆ ಸಂಪೂರ್ಣವಾಗಿ ಕುಸಿದಿದೆ. ಬೆಳಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಳ್ಳಿ ಗ್ರಾಮದ ಹಣಮಂತರಾವ್‌ ಚನ್ನಪ್ಪ ಎಂಬುವವರ ಮನೆಯ ಮುಖ್ಯ ದ್ವಾರದ ಮೇಲಿನ ಗೋಡೆ ಜೋರಾದ ಮಳೆಗೆ ಕುಸಿದಿದೆ.

ತಾಲ್ಲೂಕಿನ ವಳಖಿಂಡಿ ಗ್ರಾಮದ ನರಸಮ್ಮ ಬಂಡೆಪ್ಪ ಅವರ ಮನೆಯ ಗೋಡೆ ಸಂಪೂರ್ಣ ಕುಸಿದಿದೆ. ಮನೆಯ ಒಳಗಡೆ ಇದ್ದವರು ಜೋರಾದ ಶಬ್ದಕ್ಕೆ ತಕ್ಷಣ ಹೊರಗಡೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಚಾಂಗಲೇರಾ, ಬೇಮಳಖೇಡಾ, ಮಂಗಲಗಿ, ತಾಳಮಡಗಿ, ಕಂದಗೂಳ್‌, ಶಾಮತಾಬಾದ್‌ ಗ್ರಾಮಗಳಲ್ಲಿ ನಿತ್ಯ ಮೇಲಿಂದ ಮೇಲೆ ಮಳೆ ಸುರಿದಿದೆ.

‘ಹೊಲಗದ್ದೆಗಳಲ್ಲಿ ಬೆಳೆಯ ಮಧ್ಯೆ ಬೆಳೆದ ಕಳೆ ತೆಗೆಯಲು ರೈತರು ಕ್ರಿಮಿನಾಶಕ ಸಿಂಪರಣೆ ಮಾಡುವು ದಕ್ಕೂ ಆಗದಂತಾಗಿದೆ. ನಾಗರಿಕರು ಮನೆಗಳಿಂದ ಹೊರ ಬರದಂತಾಗಿದೆ’ ಎಂದು ಮಂಗಲಗಿ ಗ್ರಾಮದ ರುದ್ರಪ್ಪ ನಾಗನಕೇರಾ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT