ಮಂಗಳವಾರ, ಸೆಪ್ಟೆಂಬರ್ 21, 2021
21 °C
ಅಂಗವಿಕಲರಿಗೆ ನೆರವಾದ ಎಂಎಲ್‍ಸಿ ವಿಜಯಸಿಂಗ್

ಆರು ಮಂದಿಗೆ ತ್ರಿಚಕ್ರ ಸೈಕಲ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ಆರು ಮಂದಿ ಅಂಗವಿಕಲರಿಗೆ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ತಮ್ಮ ಅನುದಾನದಲ್ಲಿ ತ್ರಿಚಕ್ರ ಸೈಕಲ್ ಒದಗಿಸಿ ನೆರವಾಗಿದ್ದಾರೆ.

ಇಲ್ಲಿಯ ನಗರಸಭೆ ಕಚೇರಿ ಆವರಣದಲ್ಲಿ ವಿಜಯಸಿಂಗ್ ಅವರು ಬುಧವಾರ ಬಸವಕಲ್ಯಾಣ ತಾಲ್ಲೂಕಿನ ಅಲಗೂಡದ ಚಂದ್ರಕಾಂತ ಸಿದ್ರಾಮಪ್ಪ, ಬೀದರ್‌ನ ವಿದ್ಯಾನಗರದ ಮೀನಾಕ್ಷಿ ಮಾರುತಿ, ನಾಗೂರ(ಬಿ)ದ ಸುಭಾಷ ಮನ್ಮಥಪ್ಪ, ಔರಾದ್ ತಾಲ್ಲೂಕಿನ ಡೊಣಗಾಂವ್‍ನ ಹಣಮಂತ ಮಾಧವರಾವ್, ಜಂಬಗಿಯ ಮಹಮ್ಮದ್ ಸಲಾವುದ್ದಿನ್ ಬಾಬುಮಿಯಾ ಹಾಗೂ ಮಹಾರಾಜವಾಡಿಯ ಮಹಮ್ಮದ್ ಅಮೀರ್‌ಖಾನ್ ಅವರಿಗೆ ತ್ರಿಚಕ್ರ ವಾಹನಗಳ ಬೀಗದ ಕೈ ನೀಡಿದರು.

ತ್ರಿಚಕ್ರ ವಾಹನಕ್ಕಾಗಿ ಫಲಾನುಭವಿಗಳು ಕೋರಿಕೆ ಸಲ್ಲಿಸಿದ್ದರು. ಅವರಿಗೆ ನೆರವಾಗಲು ಶಾಸಕರ ಸ್ಥಳೀಯ ಕ್ಷೇತ್ರ ಪ್ರದೇಶಾಭಿವೃದ್ಧಿ ಯೋಜನೆಯಡಿ ತ್ರಿಚಕ್ರ ಸೈಕಲ್ ವಿತರಿಸಲಾಗಿದೆ ಎಂದು ಹೇಳಿದರು.

ಪೌರಾಯುಕ್ತ ರವೀಂದ್ರ ಅಂಗಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಠಪತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು