ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಪ್ರತಾಪನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಮಾ. 26 ರಂದು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ರ ವರೆಗೆ ಮಹಿಳಾ ನೌಕರರಿಗೆ ಬಲೂನ್ ಆಟ, ನಡಿಗೆ, ಬಾಂಬ್ ಇನ್ ದಿ ಸಿಟಿ (ಸಮೂಹ), ಹಗ್ಗ ಜಗ್ಗಾಟ (ಸಮೂಹ), ಮ್ಯುಸಿಕಲ್ ಚೇರ್, ರಂಗೋಲಿ, ಮಾಡೆಲಿಂಗ್ ಫ್ಯಾಷನ್, ಸ್ಮರಣ ಶಕ್ತಿ, ಲಿಂಬೆ-ಚಮಚ ಆಟ, ಸಮೂಹ ಸಾಂಸ್ಕøತಿಕ ಸ್ಪರ್ಧೆ (ಸಮೂಹ), ಗಾಯನ (ಸಮೂಹ ಮತ್ತು ವೈಯಕ್ತಿಕ) ಸ್ಪರ್ಧೆಗಳು ನಡೆಯಲಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
ಸಂಜೆ 5ಕ್ಕೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ದಿವ್ಯ ಸಾನಿಧ್ಯ ವಹಿಸುವರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ. ಜ್ಯೋತಿ ಪ್ರಜ್ವಲಿಸುವರು.
ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎ. ಉತ್ತಮ ಸೇವೆ ಸಲ್ಲಿಸಿದ 10 ಮಹಿಳಾ ನೌಕರರನ್ನು ಸನ್ಮಾನಿಸುವರು. ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಷನ್ ಗೌರವಾಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ವಿವಿಧ ಇಲಾಖೆಗಳ ಅಧಿಕಾರಿಗಳಾದ ಸುರೇಖಾ ಮುನ್ನೋಳಿ, ಸುವರ್ಣಾ ಯದಲಾಪುರೆ, ಎನ್. ಅಖಿಲಾಂಡೇಶ್ವರಿ, ಸಾರಿಕಾ ಗಂಗಾ ಪಾಲ್ಗೊಳ್ಳುವರು.
ಸಿದ್ದಮ್ಮ, ಕೆ. ಸುವರ್ಣಾ, ನಯನಾ ಕುಮಾರಿ ಕಲ್ಯಾಣಿ, ಗೀತಾ ಶಿವಕುಮಾರ ಗಡ್ಡಿ, ಅನುಸೂಯಾ, ಸವಿತಾ ಎನ್.ಎಂ, ಅಂಬಿಕಾ ಕನೇರಿ ಉಪಸ್ಥಿತರಿರುವರು. ಸಾಂಸ್ಕøತಿಕ ಚಟುವಟಿಕೆಗಳು ನೌಕರರ ಮನ ತಣಿಸಲಿವೆ.
ಮಹಿಳಾ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.