ಬೀದರ್: ‘ಸಹಕಾರಿ ಸಂಸ್ಥೆಗಳು ಲಾಭದಾಯಕ ಆಗಬೇಕಾದರೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪಾರದರ್ಶಕ ಆಡಳಿತ ಹಾಗೂ ಆಡಳಿತ ಮಂಡಳಿಯ ದಿನನಿತ್ಯದ ವ್ಯವಹಾರಗಳ ಮೇಲೆ ನಿಗಾ ವಹಿಸುವುದು ಅತ್ಯವಶ್ಯ’ ಎಂದು ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜ್ಯಾಂತಿಕರ ತಿಳಿಸಿದರು.

ನಗರದ್ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿಯ ಸಾಮರ್ಥ್ಯ ತರಬೇತಿ ಕೇಂದ್ರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಕಲಬುರಗಿ ಪ್ರಾಂತ, ಬೀದರ್ ಜಿಲ್ಲಾ ಸಂಪರ್ಕ ಕಚೇರಿ ವತಿಯಿಂದ ಜಿಲ್ಲೆಯ ನಷ್ಟದಲ್ಲಿರುವ ಸೌಹಾರ್ದ ಸಹಕಾರಿಗಳಿಗಾಗಿ ‘ವ್ಯವಹಾರ ಅಭಿವೃದ್ಧಿ ತರಬೇತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಗುಣಾತ್ಮಕ ಸಹಕಾರಿಗಳಿಂದ ಮಾತ್ರ ಸದೃಢ ಮತ್ತು ಸಮರ್ಥ ಭಾರತದ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ನಿರ್ದೇಶಕ ನಾಗಶೆಟ್ಟಿ ಪಾಟೀಲ ಮಾತನಾಡಿ, ‘ಸಹಕಾರಿಗಳ ವ್ಯವಹಾರ ಅಭಿವೃದ್ಧಿಗೆ ಅನುಕೂಲವಾಗುವ ಉದ್ದೇಶದಿಂದ ತರಬೇತಿ ಆಯೋಜಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕ ಶಶಿಧರ ಎಲೆ ಮಾತನಾಡಿ, ‘ನಷ್ಟದಲ್ಲಿರುವ ಸಹಕಾರಿಗಳ ಪ್ರಗತಿಗೆ ಅಗತ್ಯ ಮಾರ್ಗೋಪಾಯಗಳು, ಆದಾಯದ ಮೂಲಗಳು, ಸಂಪನ್ಮೂಲಗಳ ಸದ್ಬಳಕೆ, ವ್ಯವಹಾರ ಗಾತ್ರ ಹೆಚ್ಚಳ ಹಾಗೂ ತಂತ್ರಜ್ಞಾನ ಬಳಕೆ ಕುರಿತು ಉಪನ್ಯಾಸ ನೀಡಿದರು.

ತರಬೇತುದಾರ ಪೃಥ್ವಿರಾಜ ಲಕ್ಕಿ, ಸಂಜಯ ಕ್ಯಾಸಾ ಹಾಜರಿದ್ದರು. ಜಿಲ್ಲೆಯ 30 ಸೌಹಾರ್ದ ಸಹಕಾರಿಗಳಿಂದ ಸುಮಾರು 60 ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು. ಶ್ರೀಕಾಂತ ಸ್ವಾಮಿ ಸ್ವಾಗತಿಸಿದರು. ರಾಜೇಶ್ ಕೆ.ಎಂ. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.