ಕಮಲನಗರ: ಅಧಿಕಾರಿಗಳ ತಂಡ ವಿವಿಧ ಹೋಟೆಲ್, ಗ್ಯಾರೇಜ್, ಬೇಕರಿ ಹಾಗೂ ಅಂಗಡಿಗಳ ಮೇಲೆ ದಾಳಿ ಇಬ್ಬರು ಬಾಲಕಾ ರ್ಮಿಕರನ್ನು ರಕ್ಷಿಸಿದ್ದಾರೆ.
ಮಕ್ಕಳನ್ನು ಪಾಲಕರಿಗೆ ಒಪ್ಪಿಸಲಾಗಿದೆ.
ತಹಶೀಲ್ದಾರ್ ಅಮೀತ್ ಕುಮಾರ ಕುಲಕರ್ಣಿ, ಸಿಪಿಐ ಅಮರಪ್ಪ ಶಿವಬಲ್, ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ, ಕಟ್ಟಡ ಮತ್ತು ಇತರೆ ಕಾರ್ಮಿಕ ಅಧಿಕಾರಿ ರಾಹುಲ್ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ, ಬಿ.ಸಿ.ಎಂ ಹಾಗೂ ಇತರೆ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
ಪಿಎಸ್ಐ ಚಂದ್ರಶೇಖರ ನೀರ್ಣೆ, ಕಾರ್ಮಿಕ ಇಲಾಖೆಯ ರಘುನಾಥ, ಕಟ್ಟಡ ಕಾರ್ಮಿಕರ ಸಂಘದ ನಜೀರ್‌ಸಾಬ್, ಜಹಾಂಗೀರ್ ಸಾಬ್ ಹಾಗೂ ಹಲವರು ಉಪಸ್ಥಿತರಿದ್ದರು.