ಚಿಟಗುಪ್ಪ (ಬೀದರ್ ಜಿಲ್ಲೆ): ಈಜಾಡಲು ಹೋಗಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ವಿಠ್ಠಲಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪ್ರಶಾಂತ ಓಂಪ್ರಕಾಶ್ ಯಲಗುರ್ತಿ (22) ಹಾಗೂ ಬಸವಕಲ್ಯಾಣ ತಾಲ್ಲೂಕಿನ ದಾಸರವಾಡಿ ಗ್ರಾಮದ ಶಿವಾಜಿ (20) ಮೃತಪಟ್ಟವರು.

ಪ್ರಶಾಂತ್ ಮತ್ತು ಶಿವಾಜಿ ಸೇರಿದಂತೆ ಒಟ್ಟು ನಾಲ್ಕು ಜನ ಸ್ನೇಹಿತರು ಗ್ರಾಮದ ಹೊರವಲಯದ ಬಾವಿಯೊಂದರಲ್ಲಿ ಶನಿವಾರ ಈಜಾಡಲು ತೆರಳಿದ್ದರು. ಇಬ್ಬರು ಯುವಕರು ಈಜಾಡಿ ಮೇಲೆ ಬಂದಿದ್ದರು . ಸಮೀಪದಲ್ಲೇ ನೀರಿನಲ್ಲಿ ಮುಳುಗುತ್ತಿದ್ದ ಯುವಕನೊಬ್ಬನನ್ನು ರಕ್ಷಿಸಲು ಹೋಗಿದ್ದ ಪ್ರಶಾಂತ ಮತ್ತು ಶಿವಾಜಿ ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.