ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತಮಿತವಾಗಿ ವಾಹನ ಬಳಸಿ: ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ

Last Updated 8 ನವೆಂಬರ್ 2020, 15:48 IST
ಅಕ್ಷರ ಗಾತ್ರ

ಬೀದರ್‌: ‘ಸಣ್ಣ ಪುಟ್ಟ ಕೆಲಸಕಾರ್ಯಗಳಿಗೂ ವಾಹನಗಳನ್ನು ಬಳಸುವುದರಿಂದ ತೈಲ ಬಳಕೆ ಹೆಚ್ಚಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ವಾಹನಗಳನ್ನು ಬಳಸಬೇಕು. ಇದರಿಂದ ಇಂಧನದ ಉಳಿತಾಯ ಮಾಡಿದಂತಾಗುತ್ತದೆ. ವಾಯು ಮಾಲಿನ್ಯವನ್ನೂ ತಡೆಗಟ್ಟಿದಂತಾಗುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಸಲಹೆ ನೀಡಿದರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಯೋಜಿಸಿದ್ದ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೂರದ ಸ್ಥಳಗಳಿಗೆ ತೆರಳಲು ವಾಹನ ಬಳಸುವುದು ಸೂಕ್ತ. ಆದರೆ, ನಾವು ಹೋಗಬೇಕಿರುವ ಸ್ಥಳ ಸಮೀಪದಲ್ಲಿದ್ದರೂ ವಾಹನ ಬಳಸುವುದನ್ನು ಕಡಿಮೆ ಮಾಡಬೇಕು. ವಾಹನಗಳನ್ನು ಹಿತಮಿತವಾಗಿ ಬಳಸಬೇಕು. ನಡೆದುಕೊಂಡು ಹೋಗುವುದು ಆರೋಗ್ಯಕ್ಕೂ ಒಳ್ಳೆಯದು’ ಎಂದರು.

’ಪ್ರತಿಯೊಬ್ಬರು ತಮ್ಮ ಮನೆ ಆವರಣ ಅಥವಾ ಖುಲ್ಲಾ ಜಾಗದಲ್ಲಿ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಬೆಳೆಸಬೇಕು. ಈ ಮೂಲಕ ಶುದ್ಧಗಾಳಿ ದೊರೆಯುವಂತೆ ಮಾಡಬೇಕು’ ಎಂದು ಹೇಳಿದರು.
ಹಿರಿಯ ಮೋಟಾರು ವಾಹನ ನಿರೀಕ್ಷಕ ಸಾಯಿಪ್ರಸಾದ ಗುಡ್ಡೆ ಹಿತ್ತಲ ಮಾತನಾಡಿ’ ‘ಗುಣಮಟ್ಟದ ಇಂಧನ ಬಳಸಿದರೆ ವಾಹನಗಳು ಕಪ್ಪು ಹೊಗೆ ಹೊರ ಸೂಸುವುದಿಲ್ಲ‘ ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಖಾಜಾ ಬಿರಾನಿಬಾಷಾ, ವಿಶ್ವನಾಥ ಎಂ, ವೀರೇಂದ್ರ, ಸೈಯದ್ ಕಲೀಂ, ನಾಗೇಶ, ನರೇಶ, ದಿನೇಶ, ಭಾಗ್ಯವಂತಿ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಚಾರ್ಯ ಶಿವರಾಜ್ ಜಮಾದಾರ, ಶಕುಂತಲಾ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಚಾರ್ಯ ಪ್ರಕಾಶ ಗುಮ್ಮೆ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT