ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಶತಕ ಬಾರಿಸಿದ ಬೆಂಡೆಕಾಯಿ, ಕರಿಬೇವು 

ಗ್ರಾಹಕರ ಅಚ್ಚುಮೆಚ್ಚಿನ ನುಗ್ಗೆಕಾಯಿ ಪ್ರತಿ ಕೆ.ಜಿಗೆ ₹ 120
Last Updated 10 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಬೀದರ್: ಬಹುತೇಕ ತರಕಾರಿಗಳ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ನುಗ್ಗೆಕಾಯಿ, ಬೆಂಡೆಕಾಯಿ, ಕರಿಬೇವು ತರಕಾರಿ ಮಾರುಕಟ್ಟೆಯಲ್ಲಿ ಶತಕ ಬಾರಿಸಿದ್ದು, ಗ್ರಾಹಕರು ಹುಬ್ಬೇರಿಸುವಂತೆ ಮಾಡಿವೆ.

ಪ್ರತಿ ಕ್ವಿಂಟಲ್‌ಗೆ ಈರುಳ್ಳಿ, ಮೆಣಸಿನಕಾಯಿ, ಹೂಕೋಸು, ಹಿರೇಕಾಯಿ, ಚವಳೆಕಾಯಿ ಹಾಗೂ ಮೆಂತೆ ಸೊಪ್ಪಿನ ಬೆಲೆ ₹ 1 ಸಾವಿರ ಕಡಿಮೆಯಾಗಿದೆ. ಕರಿಬೇವು ಹಾಗೂ ನುಗ್ಗೆಕಾಯಿ ₹ 2 ಸಾವಿರ ಇಳಿದಿದೆ.

ಬೆಳ್ಳುಳ್ಳಿ, ಗಜ್ಜರಿ, ಬೀನ್ಸ್, ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಡೊಣಮೆಣಸಿನ ಕಾಯಿ, ಕೊತಂಬರಿ, ಪಾಲಕ್ ಬೆಲೆ ಸ್ಥಿರವಾಗಿದೆ. ಪ್ರತಿ ಕ್ವಿಂಟಲ್‌ಗೆ ಆಲೂಗಡ್ಡೆ, ಎಲೆಕೋಸು, ಹೂಕೋಸು, ತುಪ್ಪದ ಹಿರೇಕಾಯಿ, ಸೌತೆಕಾಯಿ, ಸಬ್ಬಸಗಿ ಬೆಲೆ ₹ 1 ಸಾವಿರ ಹೆಚ್ಚಾಗಿದೆ.

ಪ್ರತಿ ಕೆ.ಜಿಗೆ ಗ್ರಾಹಕರ ಅಚ್ಚುಮೆಚ್ಚಿನ ನುಗ್ಗೆಕಾಯಿ ₹ 120, ಬೆಂಡೆಕಾಯಿ, ಕರಿಬೇವು ₹ 100 ಹಾಗೂ ಬದನೆಕಾಯಿ ₹ 80ಗೆ ಮಾರಾಟವಾಗುತ್ತಿದೆ. ಮದುವೆ ಹಂಗಾಮು ಶುರುವಾಗಿರುವ ಕಾರಣ ಇವುಗಳಿಗೆ ಹೆಚ್ಚು ಬೇಡಿಕೆ ಬಂದಿದೆ.

ಹೈದರಾಬಾದ್‌ನಿಂದ ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಬೀನ್ಸ್, ಬೀಟ್‌ರೂಟ್‌, ಗಜ್ಜರಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ನಗರದ ಮಾರುಕಟ್ಟೆಗೆ ಬಂದಿದೆ. ಸೋಲಾಪುರ ಜಿಲ್ಲೆಯಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಹಸಿ ಶುಂಠಿ ಆವಕವಾಗಿದೆ.

‘ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್‌ ತಾಲ್ಲೂಕಿನಿಂದ ಬದನೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊಪ್ಪು ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT