ಶುಕ್ರವಾರ, ಫೆಬ್ರವರಿ 21, 2020
18 °C

ಪುಂಗನೂರು ಆಕಳ ಲೀಟರ್ ಹಾಲಿನ ಬೆಲೆ ₹250

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಲೀಟರ್ ಹಾಲಿನ ಬೆಲೆ ₹40, ₹50 ಇರುವುದನ್ನು ಕೇಳಿದ್ದೇವೆ. ಆದರೆ, ರಾಜ್ಯ ಮಟ್ಟದ ಪಶು ಮೇಳದಲ್ಲಿ ಆಕಳೊಂದರ ಹಾಲಿನ ಬೆಲೆ ಲೀಟರ್‌ಗೆ ₹250 ಇರುವ ವಿಷಯ ರೈತರನ್ನು ಆಶ್ಚರ್ಯ ಚಕಿತಗೊಳಿಸಿತು.

ಹೈದರಾಬಾದ್‌ನ ಕೋಟೇಶ್ವರರಾವ್ ಮುಕಮಲ್ ಅವರು ತಮ್ಮ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಪುಂಗನೂರು ಆಕಳ ಹಾಲಿನ ಬೆಲೆಯೇ ಅನೇಕರು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿತು.

‘ಹೋಮಿಯೊಪತಿ ಔಷಧ ತಯಾರಿಕೆಗೆ ಬಳಸುವ ಕಾರಣ ಪುಂಗನೂರು ತಳಿ ಆಕಳ ಹಾಲಿನ ಬೆಲೆ ಪ್ರತಿ ಲೀಟರ್‌ಗೆ ₹250 ಇದೆ’ ಎಂದು ಕೋಟೇಶ್ವರರಾವ್ ತಿಳಿಸಿದರು.

‘ಪುಂಗನೂರು ತಳಿಯ ಆಕಳು ಹಾಗೂ ಹೋರಿ ತೀರಾ ಗಿಡ್ಡವಾಗಿರುವ ಕಾರಣ ಮನೆಯಲ್ಲೂ ಸಾಕಬಹುದಾಗಿದೆ. ವ್ಯರ್ಥವಾಗಿ ಹೋಗುವ ತರಕಾರಿಯನ್ನೇ ಆಹಾರವಾಗಿ ಕೊಡಬಹುದಾಗಿದೆ’ ಎಂದು ಹೇಳಿದರು.

‘ಪ್ರದರ್ಶನದಲ್ಲಿ ಇರುವ ಆಕಳು 26 ಇಂಚ್ ಹಾಗೂ ಹೋರಿ 27 ಇಂಚ್ ಎತ್ತರ ಇವೆ. ಆಕಳ ಬೆಲೆ ₹3 ಲಕ್ಷ ಹಾಗೂ ಹೋರಿ ಬೆಲೆ ₹2 ಲಕ್ಷ ಇದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು