ಗುರುವಾರ , ಜೂನ್ 30, 2022
27 °C

ಜಾಗ ವಿವಾದ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲನಗರ: ತಾಲ್ಲೂಕಿನ ಬೆಳಕುಣಿ(ಬಿ) ಗ್ರಾಮದಲ್ಲಿ ಸಹೋದರ ಸಂಬಂಧಿ ನಡುವಿನ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಶಾಂತಾಬಾಯಿ ಧನಾಜಿ ಮುರ್ತಳೆ (50) ಮೃತಪಟ್ಟವರು. ಗುಣಾಜಿ ಮತ್ತು ಧನಾಜಿ ಸಹೋದರ ನಡುವೆ ಮನೆ ಕಟ್ಟುವ ವಿಚಾರವಾಗಿ ಸುಮಾರು 4 ವರ್ಷಗಳಿಂದ ಜಗಳ ನಡೆಯುತ್ತಿತ್ತು. ಶುಕ್ರವಾರ ಇದೇ ಕಾರಣಕ್ಕೆ ಜಗಳವಾಗಿದ್ದು, ಗುಣಾಜಿ ಮಾಧವರಾವ ಅವರು ಕೋಪದಿಂದ ಶಾತಾಬಾಯಿ ಅವರಿಗೆ ಇಟಗಿಯಿಂದ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರ ಗಾಯಗೊಂಡ ಅವರನ್ನು ಕಮಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಉದಗಿರ ಆಸ್ಪತ್ರೆಗೆ ಕೊರೆದೊಯ್ಯುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ ಎಂದು ಪಿಎಸ್‍ಐ ಬಸವರಾಜ ಪಾಟೀಲ
ಹೇಳಿದ್ದಾರೆ.

ಗುಣಾಜಿ ಮಾಧವರಾವ, ಅವರ ಪುತ್ರ ದತ್ತಾ ಮತ್ತು ಸೊಸೆ ರಾಣಿ  ಅವರರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಎಸ್‍ಪಿ ಡಿ.ಕಿಶೋರಬಾಬು, ಎಎಸ್‌ಪಿ ಪೃಥ್ವಿಕ್ ಶಂಕರ್, ಸಿಪಿಐ ರಾಮಪ್ಪ ಸಾವಳೆ ಭೇಟಿ ನೀಡಿದರು. ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.