ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಣ್ಣು ದಿನ: ಜಾಗೃತಿ ನಡಿಗೆ

Last Updated 5 ಡಿಸೆಂಬರ್ 2022, 13:39 IST
ಅಕ್ಷರ ಗಾತ್ರ

ಬೀದರ್‌: ಇಶಾ ಫೌಂಡೇಷನ್‌, ರೋಟರಿ ಕ್ಲಬ್‌ ಹಾಗೂ ತೋಟಗಾರಿಕೆ ಕಾಲೇಜು ಆಶ್ರಯದಲ್ಲಿ ವಿಶ್ವ ಮಣ್ಣು ದಿನಾಚರಣೆ ಪ್ರಯುಕ್ತ ನಗರದಲ್ಲಿ ಮಣ್ಣು ಜಾಗೃತಿ ನಡಿಗೆ ನಡೆಯಿತು.

ನಗರದ ಗುಂಪಾದ ಎನ್‌.ಕೆ.ಜಾಬಶೆಟ್ಟಿ ಆಯುರ್ವೇದ ಕಾಲೇಜಿನಿಂದ ಆರಂಭವಾದ ನಡಿಗೆ ಮೈಲೂರ್‌ ಕ್ರಾಸ್, ಬೋಮಗೊಂಡೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.

‘ಮಣ್ಣಿನಿಂದಲೇ ಆಹಾರ ಉತ್ಪಾದನೆ ಆರಂಭ’ ಘೋಷ ವಾಕ್ಯದೊಂದಿಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲಾಯಿತು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ್, ಸಂಪನ್ಮೂಲ ವ್ಯಕ್ತಿ ಪ್ರವೀಣ ನಾಯ್ಕೋಡಿ, ರೋಟರಿ ಕ್ಲಬ್‌ ಆಫ್‌ ಬೀದರ್‌ ನ್ಯೂಸೆಂಚೂರಿ ಅಧ್ಯಕ್ಷ ನಿತಿನ್‌ ಕರ್ಪೂರ್, ಕಾಮಶೆಟ್ಟಿ ಚಿಕ್ಕಬಸೆ, ಸಚ್ಚಿದಾನಂದ ಚಿದ್ರೆ, ಹಣುಮು ಪಾಜಿ, ಸತೀಶ ಸ್ವಾಮಿ, ಸಾಧನಾ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT