ಬುಧವಾರ, ಜನವರಿ 27, 2021
21 °C

ಯಾದಗಿರಿ: ವಿದ್ಯುತ್ ಹರಿದು ಲೈನ್ ಮನ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯರಗೋಳ (ಯಾದಗಿರಿ ಜಿಲ್ಲೆ): ಸಮೀಪದ ಅರಿಕೇರಾ (ಬಿ) ಗ್ರಾಮದ ಹೊರ ವಲಯದಲ್ಲಿ ನೂತನ ವಿದ್ಯುತ್ ಪರಿವರ್ತಕ ಅಳವಡಿಸುವ ವೇಳೆ ಏಕಾಏಕಿ ವಿದ್ಯುತ್ ಹರಿದು ಲೈನ್ ಮನ್ ಸಾವನ್ನಪ್ಪಿದ್ದಾರೆ.

ಠಾಣಗುಂದಿ ಜೆಸ್ಕಾಂ ಸ್ಟೇಷನಲ್ಲಿ ಗುತ್ತಿಗೆ ಆಧಾರದ ಮೇಲೆ ಲೈನ್ ಮನ್ ಆಗಿ ಕೆಲಸಮಾಡುತ್ತಿದ್ದ ಬಸಪ್ಪ (30) ಸಾವನ್ನಪ್ಪಿದವರು.

ಮರಿಲಿಂಗಪ್ಪ ಎನ್ನುವ ಲೈನ್ ಮನ್ ಆರೋಗ್ಯ ಸ್ಥಿತಿ  ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿಗೆ ಕೊಂಡೊಯ್ಯಲಾಗಿದೆ
ಎಂದು ಸ್ಥಳೀಯರು ತಿಳಿಸಿದ್ದಾರೆ.

ದುರಸ್ತಿ ಮಾಡುವ ವೇಳೆ ಘಟನೆ ಸಂಭವಿಸಿದೆ. ವಿದ್ಯುತ್ ತಗುಲಿ ಬಸಪ್ಪ ದೇಹ ಕಂಬದಲ್ಲಿ ನೇತಾಡುತ್ತಿತ್ತು.

ಸ್ಥಳಕ್ಕೆ ಯಾದಗಿರಿ ಜೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ಪ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು