ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್ 9ರಿಂದ ಕಲ್ಯಾಣ ಪರ್ವ

Last Updated 13 ಸೆಪ್ಟೆಂಬರ್ 2011, 8:20 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಬರುವ ಅಕ್ಟೋಬರ್ 9 ರಿಂದ 11 ರವರೆಗೆ 10ನೇ `ಕಲ್ಯಾಣ ಪರ್ವ~ ನಡೆಯಲಿದೆ ಎಂದು ನವದೆಹಲಿ ಬಸವ ಮಂಟಪದ ಸಂಚಾಲಕ ಚೆನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಸುಮಾರು 3 ಲಕ್ಷ ಭಕ್ತರು ಭಾಗವಹಿಸುವ ನೀರಿಕ್ಷೆ ಇದೆ. ಮೂರು ದಿನಗಳ ಕಾಲ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುವುದು. `ಕಲ್ಯಾಣ ಪರ್ವ~ದ ಪ್ರಚಾರಕ್ಕಾಗಿ 15 ತಂಡಗಳನ್ನು ರಚಿಸಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಾಂಡಿಚೇರಿ, ಗೋವಾ, ನವ ದೆಹಲಿ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳ ಭಕ್ತರು ಆಗಮಿಸಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆಗಾಗಿ ಬೀದರ್, ಗುಲ್ಬರ್ಗ, ಹೈದರಾಬಾದ್, ಜಹೀರಾಬಾದ್, ಉದಗೀರ್ ಮತ್ತಿತರ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರನ್ನು ಒಳಗೊಂಡ 22 ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಕಾರ್ಯಕ್ರಮದ ನಿಮಿತ್ತ ಚಿಂತನಗೋಷ್ಠಿ, ಧಾರ್ಮಿಕ ಸ್ಪರ್ಧೆ, ಬಸವ ಧರ್ಮ ವಿಜಯೋತ್ಸವ, ಮೆರವಣಿಗೆ, ಪಥಸಂಚಲನ, ಅಲ್ಲಪ್ರಭು ಶೂನ್ಯ ಪೀಠಾರೋಹಣ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಸವಧರ್ಮ ಪೀಠ ಟ್ರಸ್ಟ್ ಬಸವಕಲ್ಯಾಣದಲ್ಲಿ ಶರಣ ಸಂಸ್ಕೃತಿ ಪುನರುತ್ಥಾನಕ್ಕೆ ಸಂಕಲ್ಪ ತೊಟ್ಟಿದೆ. ಈಗಾಗಲೇ ಬಸವ ಮಹಾಮನೆ ಸ್ಥಾಪಿಸಿ ನಿತ್ಯ ದಾಸೋಹ ಹಾಗೂ ಹುಣ್ಣಿಮೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಬಸವ ಮಂಟಪ ನಿರ್ಮಾಣ, ಯಾತ್ರಿಗಳು ಉಳಿದುಕೊಳ್ಳುವುದಕ್ಕಾಗಿ ಶರಣ ಧಾಮ, ಬಸವಣ್ಣ ಹಾಗೂ ಅವರ ಸಮಕಾಲಿನ ಶರಣರನ್ನು ಸ್ಮರಿಸುವ ಬೃಹತ್ ಸ್ಮಾರಕ ರಚನೆ ಮತ್ತಿತರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಉದ್ದೇಶವಿದೆ. 108 ಅಡಿ ಎತ್ತರದ ಬಸವಣ್ಣನವರ ಪುತ್ಥಳಿ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಕೇವಲ ಮುಖದ ಕೆಲಸ ಮಾತ್ರ ಉಳಿದಿದೆ. ಮುಂದಿನ ವರ್ಷದವರೆಗೆ ಮೂರ್ತಿ ಪೂರ್ಣಗೊಳ್ಳಲಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಮೂರ್ತಿ ಸ್ಥಾಪನೆ ಮಾಡಲಾಗುತ್ತಿದೆ. ಶರಣ ಗ್ರಾಮ ಯೋಜನೆಗೆ 5 ಕೋಟಿ ಖರ್ಚು ಮಾಡಲಾಗಿದ್ದು, ಇನ್ನೂ 10 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಹೇಳಿದರು.

ಈ ಎಲ್ಲ ಯೋಜನೆಗಳು ಬಸವಭಕ್ತರು ದಾನಿಗಳು ಉದಾರವಾಗಿ ನೆರವು ನೀಡಬೇಕು ಎಂದರು. ಕಲ್ಯಾಣ ಪರ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಮಾತೆ ನಿಶ್ಚಲಾಂಬ ಲಿಂಗಾಯತ ಸಮಾಜ ರಾಜ್ಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ್, ಜಿಲ್ಲಾ ಅಧ್ಯಕ್ಷ ಕುಶಾಲರಾವ ಪಾಟೀಲ್ ಖಾಜಾಪುರ, ಗಂಗಶೆಟ್ಟಿ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT