ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರಾಜ್ಯದಲ್ಲಿ ‘ಪ್ರತಿಭೆ’ಗಳ ಮಿಂಚು

ಶೈಕ್ಷಣಿಕ ಅಂಗಳ
Last Updated 25 ಡಿಸೆಂಬರ್ 2013, 7:56 IST
ಅಕ್ಷರ ಗಾತ್ರ

ಬೀದರ್: ಜಮ್ಮುವಿನಲ್ಲಿ ನಡೆಯಲಿ ರುವ ಪ್ರಾಥಮಿಕ ಶಾಲಾ ವಿಭಾಗದ ರಾಷ್ಟ್ರಮಟ್ಟದ ವಾಲಿಬಾಲ್‌ ಪಂದ್ಯಾವಳಿ ಯಲ್ಲಿ ಗಡಿ ಜಿಲ್ಲೆ ಬೀದರ್‌ನ 4 ವಿದ್ಯಾರ್ಥಿಗಳು ಮಿಂಚಲಿದ್ದಾರೆ.

ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಆರು ಮಂದಿಯಲ್ಲಿ ಬೀದರ್‌ ಜಿಲ್ಲೆಯವರೇ ನಾಲ್ಕು ಮಂದಿ ಇದ್ದಾರೆ. ಕೊಪ್ಪಳ ಜಿಲ್ಲೆಯಿಂದ ಇಬ್ಬರು ಆಯ್ಕೆಯಾಗಿದ್ದಾರೆ.

ನಗರದ ಸಾಯಿ ಆದರ್ಶ ಶಾಲೆಯ ಅರವಿಂದ ಗುಂಡಪ್ಪ, ನಾಗಶೆಟ್ಟಿ ಧನಶೆಟ್ಟಿ, ಆಕಾಶ್‌ ಶಾಲಿವಾನ್‌, ಬೀದರ್‌ ತಾಲ್ಲೂಕಿನ ಬುಧೇರಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಾರ್ಟಿನ್‌ ಮಹೇಶ್‌ ರಾಷ್ಟ್ರಮಟ್ಟದ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ಅರವಿಂದ, ನಾಗಶೆಟ್ಟಿ, ಆಕಾಶ್‌ ಈ ಮೂವರು ಔರಾದ್‌ ತಾಲ್ಲೂಕಿನ ಮಸ್ಕಲ್‌ ಗ್ರಾಮದವರು. ಸದ್ಯ ನಗರದ ಕ್ರೀಡಾ ವಸತಿನಿಲಯದಲ್ಲಿ ಉಳಿದುಕೊಂಡು, ಸಾಯಿ ಆದರ್ಶ ಶಾಲೆ ಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ಸ್ಪರ್ಧಾ ಗಳು ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್‌ 7 ಮತ್ತು 8ರಂದು ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ವಿಭಾಗ ಮಟ್ಟದ ತಂಡ ಪ್ರತಿನಿಧಿಸಿದ್ದರು.

ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ 12 ಸ್ಪರ್ಧಾ ಳುಗಳ ಪೈಕಿ ಒಟ್ಟು ಆರು ಸ್ಪರ್ಧಾಳುಗಳನ್ನು ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಪ್ರತಿನಿಧಿಸ ಲಿರುವ ರಾಜ್ಯ ತಂಡಕ್ಕೆ ಆಯ್ಕೆ ಮಾಡ ಲಾಗುತ್ತದೆ.
ಅದೇ ಸಾಯಿ ಶಾಲೆ ಹಾಗೂ ಬುಧೇರಾ ಶಾಲೆಯ ವಿದ್ಯಾರ್ಥಿಗಳು ವಿಭಾಗಮಟ್ಟದ ತಂಡ ಪ್ರತಿನಿಧಿಸಿದ್ದ ಜಿಲ್ಲೆಯ ಈ ನಾಲ್ವರು ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಕ ದಿಲೀಪ್‌ ಎಸ್. ಮಾಲಿಪಾಟೀಲ್ ತಿಳಿಸಿದ್ದಾರೆ.

ಸಾಯಿ ಆದರ್ಶ ಶಾಲೆಯ ಮಕ್ಕಳು ಪ್ರತಿವರ್ಷ ಒಂದಲ್ಲ, ಒಂದು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಾರೆ. ಈಗ ರಾಷ್ಟ್ರಮಟ್ಟದ ವಾಲಿಬಾಲ್‌ ಪಂದ್ಯಾವಳಿಗೆ ಆಯ್ಕೆಯಾಗಿರು ವುದು ಸಂತಸ ಮೂಡಿಸಿದೆ. ದೈಹಿಕ ಶಿಕ್ಷಕ ದಿಲೀಪ್‌ ಮಾಲಿಪಾಟೀಲ್‌ ಅವರು ನೀಡಿದ ತರಬೇತಿಯೂ ಈ ಸಾಧನೆಗೆ ಕಾರಣ ಎಂದು ಶಾಲೆಯ ಮುಖ್ಯಗುರು ಮಲ್ಲಮ್ಮ ರೊಡ್ಡಾ ಸಂತಸ ವ್ಯಕ್ತಪಡಿಸುತ್ತಾರೆ.

‘ಬಹುದಿನದ ಕನಸು ನನಸಾಗಿದೆ’
‘ರಾಷ್ಟ್ರಮಟ್ಟ ಯಾವುದಾದರೂ ಒಂದು ಕ್ರೀಡೆಯಲ್ಲಿ ಆದರೂ ನಮ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂಬುದು ಬಹಳದಿನಗಳ ಕನಸು. ಈಗ ನನಸಾಗಿದೆ. ಶಾಲೆಯ ಮಕ್ಕಳು ಎತ್ತರ ಜಿಗಿತ, ಉದ್ದ ಜಿಗಿತ, ಚಕ್ರ ಎಸೆತ (ಡಿಸ್ಕಸ್ ಥ್ರೋ) ಸ್ಪರ್ಧೆಗಳಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಈಗ  ರಾಷ್ಟ್ರಮಟ್ಟದ ವಾಲಿಬಾಲ್‌ ಪಂದ್ಯಾವಳಿಗೆ ಆಯ್ಕೆಯಾಗಿ ಗಮನಸೆಳೆದಿದ್ದಾರೆ’
–ದಿಲೀಪ್‌ ಎಸ್‌. ಮಾಲಿಪಾಟೀಲ್‌, ದೈಹಿಕ ಶಿಕ್ಷಣ ಶಿಕ್ಷಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT