ಬೆಂಗಳೂರು: ನಗರದ ಬಿಲೆಕಹಳ್ಳಿಯಲ್ಲಿ ಮಜೆಂಟಾ ಮೊಬಿಲಿಟಿ ಕಂಪನಿ ಅತಿದೊಡ್ಡ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಡಿಪೊವನ್ನು ಆರಂಭಿಸಿದೆ.

ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ ಬಿ.ವಿ. ಫಾಲನೇತ್ರ ಅವರು ಚಾರ್ಜಿಂಗ್ ಡಿಪೊ ಉದ್ಘಾಟಿಸಿದರು.

ಹೊಸ ಚಾರ್ಜಿಂಗ್ ಡಿಪೊ 11 ಸಾವಿರ ಚದರ ಅಡಿ ವಿಶಾಲವಾಗಿದ್ದು, 3.3 ಕಿಲೋ ವಾಟ್‌ನ 63 ಎಸಿ ಚಾರ್ಜರ್ ಮತ್ತು 15 ಕಿಲೋ ವಾಟ್ ಜಿಬಿ/ಟಿಯ ಮೂರು ಡಿಸಿ ಚಾರ್ಜರ್‌ಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಚಾರ್ಜಿಂಗ್ ಪೋರ್ಟ್‌ಗಳನ್ನು ಹೆಚ್ಚಿಸಲೂ ಇಲ್ಲಿ ಸ್ಥಳಾವಕಾಶವಿದೆ. ಬೆಂಗಳೂರಿನಲ್ಲಿ ಮಜೆಂಟಾ ಆರಂಭಿಸಿರುವ 23ನೇ ಚಾರ್ಜಿಂಗ್ ಡಿಪೊ ಇದಾಗಿದ್ದು, ಭಾರತದಲ್ಲಿ 35ನೇಯದ್ದಾಗಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಇನ್ನೂ 14 ಚಾರ್ಜಿಂಗ್ ಡಿಪೊಗಳನ್ನು ಆರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ.

ಬಿಲೇಕಹಳ್ಳಿಯ ಹೊಸ ಚಾರ್ಜಿಂಗ್ ಡಿಪೋದಲ್ಲಿ ಒಂದೇ ಬಾರಿಗೆ 70 ವಾಹನಗಳ ಚಾರ್ಜಿಂಗ್ ಮಾಡಬಹುದು. ಚಾರ್ಜರ್‌ಗಳಿಗೆ ನಿರಂತರ ವಿದ್ಯುತ್ ಕಲ್ಪಿಸಲು 315 ಕೆವಿಎ ಸಬ್‌ಸ್ಟೇಷನ್ ಸ್ಥಾಪಿಸಲಾಗಿದೆ.

ಫಾಲನೇತ್ರ ಅವರು ಮಾತನಾಡಿ ‘ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಮತ್ತು ಬೆಂಗಳೂರನ್ನು ಒಂದು ಸುಸ್ಥಿರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಚಾರ್ಜಿಂಗ್ ಡಿಪೋ ಒಂದು ಮಹತ್ವದ ಹೆಜ್ಜೆಯಾಗಿದೆ. ಸುಸ್ಥಿರ, ಸುಂದರ ಮತ್ತು ಪರಿಸರಸ್ನೇಹಿ ಭವಿಷ್ಯಕ್ಕಾಗಿ ಖಾಸಗಿ ಕಂಪನಿಗಳು ಇಂಥ ಸೌಲಭ್ಯಗಳನ್ನು ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲು ಮುಂದಾಗಬೇಕು” ಎಂದು ಕೋರಿದರು.

ಮಜೆಂಟಾ ಮೊಬಿಲಿಟಿಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಮ್ಯಾಕ್ಸನ್ ಲೂಯಿಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.